KEA ಪರೀಕ್ಷೆಯಲ್ಲಿ ಅಕ್ರಮ: ಸಿಐಡಿ ಎಸ್‌ಪಿ ಕಲಬುರಗಿಗೆ ಭೇಟಿ
Update: 2023-11-13 22:15 IST
ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ ಹಿನ್ನೆಲೆ ಸಿಐಡಿ ಎಸ್ ಪಿ ರಾಘವೇಂದ್ರ ಹೇಗಡೆಯವರು ಸೋಮವಾರ ಕಲಬುರಗಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಪ್ರಕರಣ ಕುರಿತು ಮಾಹಿತಿ ಕಲೆಹಾಕಿದರು.
ನಗರದ ಐವಾನ್ ಶಾಹೀಯಲ್ಲಿರುವ ಸಿಐಡಿ ಕಚೇರಿಗೆ ಭೇಟಿ ಡಿ.ವೈ.ಎಸ್.ಪಿ ಶಂಕರಗೌಡ ಮತ್ತು ಡಿ.ವೈ.ಎಸ್.ಪಿ ತನ್ವಿರ್, ಎಸ್.ಪಿ.ಡಿ.ವೈ.ಎಸ್‌ಪಿಗಳ ಜೊತೆ ಅಫಜಲಪುರ ಮತ್ತು ಕಲಬುರಗಿಯಲ್ಲಿ ಪರೀಕ್ಷೆಯಲ್ಲಿ ನಡೆಸಿರುವ ಆಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.