×
Ad

ಬೆಂಗಳೂರಿಗೆ ಬ್ರಿಟನ್ ರಾಜ ಚಾರ್ಲ್ಸ್ III ರಹಸ್ಯ ಭೇಟಿ

Update: 2024-10-30 16:17 IST

PC : indianexpress.com

ಬೆಂಗಳೂರು : ಬ್ರಿಟನ್ ಕಿಂಗ್ ಚಾರ್ಲ್ಸ್ III ಮತ್ತು ರಾಣಿ ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಭೇಟಿ ನೀಡಿದ್ದು, ಅ. 27ರಿಂದ ಅವರು ಬೆಂಗಳೂರಿನಲ್ಲಿದ್ದಾರೆ.

ರಾಜಮನೆತನದ ದಂಪತಿಗಳು ಪ್ರಕೃತಿ ಚಿಕಿತ್ಸೆ ಪಡೆಯುವುದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ರಾತ್ರಿಯವರೆಗೆ ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಹೆಲ್ತ್ ಸೆಂಟರ್ ನಲ್ಲಿ ವಾಸ್ತವ್ಯವಿರಲಿದ್ದಾರೆ. ರಾಜರ ರಹಸ್ಯ ಭೇಟಿಯಿಂದಾಗಿ ಹೆಲ್ತ್ ಸೆಂಟರ್ ಸುತ್ತ ಹೆಚ್ಚಿನ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬ್ರಿಟನ್ ರಾಣಿ ಎಲಿಜಬೆತ್ II ಅವರ ಮರಣದ ನಂತರ 2023ರ ಮೇ 6ರಂದು ಕಿಂಗ್ ಚಾರ್ಲ್ಸ್ III ಅವರ ಪಟ್ಟಾಭಿಷೇಕ ನಡೆದಿತ್ತು. ಆ ಬಳಿಕ ಇದು ಕಿಂಗ್ ಚಾರ್ಲ್ಸ್ III ಅವರ ಮೊದಲ ಭಾರತದ ಭೇಟಿಯಾಗಿದೆ.

ಖಾಸಗಿ ಹೆಲ್ತ್ ಸೆಂಟರ್ ನಲ್ಲಿ ಯೋಗ, ಧ್ಯಾನ ಮೂಲಕ ಕಿಂಗ್ ಚಾರ್ಲ್ಸ್ III ದಂಪತಿ ದಿನಚರಿ ಆರಂಭಿಸುತ್ತಿದ್ದು ನಂತರ ಉಪಹಾರ ಸೇವಿಸಲಿದ್ದಾರೆ. ಸ್ವಲ್ಪ ವಿರಾಮ ನಂತರ, ಎರಡನೇ ಸುತ್ತಿನ ಚಿಕಿತ್ಸೆಗಳು ಪ್ರಾರಂಭವಾಗಿ ರಾತ್ರಿ 9 ಗಂಟೆಗೆ ಊಟ ಮತ್ತು ಧ್ಯಾನದೊಂದಿಗೆ ದಿನಚರಿ ಮುಕ್ತಾಯವಾಗಲಿದೆ.

ಕಿಂಗ್ ಚಾರ್ಲ್ಸ್ ಈ ಹಿಂದೆಯೂ ಇಲ್ಲಿಗೆ ಭೇಟಿ ನೀಡಿದ್ದರು. ಇದೇ ಆರೋಗ್ಯ ಕೇಂದ್ರದಲ್ಲಿ 2019ರಲ್ಲಿ ಅವರು ತಮ್ಮ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News