×
Ad

ಕುಮಾರಸ್ವಾಮಿ ಅವರ ಹಿಂದಿನ ಸರಕಾರದ ವ್ಯವಹಾರವನ್ನು ಈಗ ಹೇಳುತ್ತಿದ್ದಾರೆ: ಸಿದ್ದರಾಮಯ್ಯ

Update: 2023-11-19 19:16 IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ. 19: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೂರು ಬಾರಿ ಎಕ್ಸ್ ಪೋಸ್ಟ್ ಹಾಕಿದರೂ, ಅವುಗಳಿಗೆ ಉತ್ತರಿಸುವ ಅವಶ್ಯಕತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು," ಕುಮಾರಸ್ವಾಮಿ, ಅವರ ಸರಕಾರದ ಅವಧಿಯಲ್ಲಿ ಮಾಡುತ್ತಿದ್ದ ವರ್ಗಾವಣೆ ಮತ್ತು ಹಣದ ವ್ಯವಹಾರವನ್ನು ಈಗ ಹೇಳುತ್ತಿದ್ದಾರೆ. ನಾನು ಈ ಮೊದಲೂ ಹೇಳಿದಂತೆ, ಹಣ ತೆಗೆದುಕೊಂಡು ವರ್ಗಾವಣೆ ಮಾಡಿಸಿದ್ದರೆ, ನನ್ನ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುತ್ತೇನೆ" ಎಂದು ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News