ಗೃಹ ಸಚಿವರ ವಿಶೇಷ ಕರ್ತವ್ಯಧಿಕಾರಿಯಾಗಿ ಐಜಿಪಿ ಲಾಭೂ ರಾಮ್ ನೇಮಕ
Update: 2026-06-15 23:01 IST
ಲಾಭೂ ರಾಮ್ (Photo credit: newindianexpress.com)
ಬೆಂಗಳೂರು: ನಿಯೋಜನೆಯ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಲಾಭೂ ರಾಮ್ ಅವರನ್ನು ಇದೇ ಮೊದಲ ಬಾರಿಗೆ ಗೃಹ ಸಚಿವರ ವಿಶೇಷ ಕರ್ತವ್ಯಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಐಜಿಪಿ ಲಾಭೂ ರಾಮ್ ಅವರು ಬೆಂಗಳೂರು ಕಂಪ್ಯೂಟರ್ ವಿಭಾಗದ ಜೊತೆಗೆ ಗೃಹ ಸಚಿವರ ವಿಶೇಷ ಅಧಿಕಾರಿಯಾಗಿಯೂ ಹೊಣೆಗಾರಿಕೆಯನ್ನು ನಿಭಾಯಿಸಲಿದ್ದಾರೆ.
ಈವರೆಗೆ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಉಸ್ತುವಾರಿ ಹೊತ್ತಿದ್ದ ಹಿರಿಯ ಅಧಿಕಾರಿ ಪ್ರಣಬ್ ಮೊಹಂತಿ ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.