ನಮ್ಮ ಎಚ್‍ಎಎಲ್ ಅನ್ನು ನಮಗೆ ಬಿಡಿ: ಪ್ರಧಾನಿ ಮೋದಿ ಭೇಟಿಗೆ ಕಾಂಗ್ರೆಸ್ ಲೇವಡಿ
Update: 2023-11-25 18:27 IST
Photo:x//@narendramodi
ಬೆಂಗಳೂರು: ಎಚ್‍ಎಎಲ್‍ನಲ್ಲಿ ಫೊಟೋಶೂಟ್ ಮಾಡಿಸಿಕೊಂಡ ಮೋದಿ ಅವರೇ, ಇದೇ ಎಚ್‍ಎಎಲ್‍ನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ? ಎಚ್‍ಎಎಲ್ ದ್ರೋಹವೆಸಗಿ ಈಗ ಫೊಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಶನಿವಾರ Xನಲ್ಲಿ ಸರಣಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಮಾರಾಟಗಾರ ನರೇಂದ್ರ ಮೋದಿ ಅವರೇ, ನಮ್ಮ ಹೆಮ್ಮೆಯ ಎಚ್‍ಎಎಲ್ ಅನ್ನು ಮಾರಬೇಡಿ. ಕೇವಲ ಫೊಟೋಶೂಟ್ ಮಾಡಿಸಿಕೊಳ್ಳಲು ಎಚ್‍ಎಎಲ್‍ಗೆ ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ. ಆದರೆ ನಮ್ಮ ಎಚ್‍ಎಎಲ್ ಅನ್ನು ನಮಗೆ ಬಿಡಿ’ ಎಂದು ಲೇವಡಿ ಮಾಡಿದೆ.