ಆ.13 ರಿಂದ 27ರವರೆಗೆ ವಿಧಾನ ಮಂಡಲ ಅಧಿವೇಶನ

Update: 2026-07-28 19:59 IST

Photo: PTI

ಬೆಂಗಳೂರು : ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನವು ಆಗಸ್ಟ್ 13 ರಿಂದ 27ರ ವರೆಗೆ ನಡೆಸಲು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಆ.13ರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಹಾಗೂ ವಿಧಾನಪರಿಷತ್ತು ಸಮಾವೇಶಗೊಳ್ಳಲಿದ್ದು, ಖಾಸಗಿ-ಸರಕಾರಿ ಕಾರ್ಯಕಲಾಪಗಳು ನಡೆಯಲಿವೆ. ಆ.14ರಂದು ಸರಕಾರಿ ಕಾರ್ಯಕಲಾಪಗಳು, ಆ.15ರಂದು ಸಾರ್ವತ್ರಿಕ ರಜಾದಿನ, ಆ.16ರಂದು ಸಾರ್ವತ್ರಿಕ ರಜಾದಿನ, ಆ.17ರಂದು ಸರಕಾರಿ ಕಾರ್ಯಕಲಾಪಗಳು, ಆ.18ರಂದು ಸರಕಾರಿ ಕಾರ್ಯಕಲಾಪಗಳು ನಡೆಯಲಿವೆ.

ಆ.19ರಂದು ಸರಕಾರಿ ಕಾರ್ಯಕಲಾಪಗಳು, ಆ.20ರಂದು ಖಾಸಗಿ-ಸರಕಾರಿ ಕಾರ್ಯಕಲಾಪಗಳು, ಆ.21ರಂದು ಸರಕಾರಿ ಕಾರ್ಯಕಲಾಪಗಳು, ಆ.22ರಂದು ಸಾರ್ವತ್ರಿಕ ರಜಾದಿನ, ಆ.23ರಂದು ಸಾರ್ವತ್ರಿಕ ರಜಾದಿನ, ಆ.24ರಂದು ಸರಕಾರಿ ಕಾರ್ಯಕಲಾಪಗಳು ನಡೆಯಲಿವೆ.

ಆ.25ರಂದು ಸರಕಾರಿ ಕಾರ್ಯಕಲಾಪಗಳು, ಆ.26ರಂದು ಸಾರ್ವತ್ರಿಕ ರಜಾದಿನ ಹಾಗೂ ಆ.27ರಂದು ಖಾಸಗಿ-ಸರಕಾರಿ ಕಾರ್ಯಕಲಾಪಗಳು ನಡೆಯಲಿವೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ನಡೆಯಲಿರುವ ಮೊದಲ ವಿಧಾನಮಂಡಲದ ಅಧಿವೇಶನ ಇದಾಗಿದ್ದು, ಪ್ರತಿಪಕ್ಷಗಳನ್ನು ನೂತನ ಸರಕಾರ ಯಾವ ರೀತಿ ಎದುರಿಸಲಿದೆ ಎಂದು ಕಾದು ನೋಡಬೇಕಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News