×
Ad

ಒರಿಜಿನಲ್ JDS ಎಂದು ಅವರೇ ಬೋರ್ಡ್​ ಹಾಕಿಕೊಳ್ಳಲಿ; ಸಿ.ಎಂ. ಇಬ್ರಾಹಿಂಗೆ ಕುಮಾರಸ್ವಾಮಿ ತಿರುಗೇಟು

Update: 2023-10-17 11:34 IST

ಬೆಂಗಳೂರು: ʼʼಒರಿಜಿನಲ್ ಜೆಡಿಎಸ್​ ನಮ್ಮದೇ, ಅಧ್ಯಕ್ಷ ಸ್ಥಾನದಿಂದ ತೆಗೆಯಲು ಆಗಲ್ಲʼʼ ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼನಿಮಗೆ (ಮಾಧ್ಯಮಗಳಿಗೆ) ಈ ವಿಚಾರ ದೊಡ್ಡದಾಗಿ ಕಾಣುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಅವರೇ ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಎಂದು ಬರೆದುಕೊಳ್ಳಲಿʼʼ ಎಂದು ತಿರುಗೇಟು ಕೊಟ್ಟರು. 

ಪಕ್ಷದಿಂದ ಉಚ್ಚಾಟನೆ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼʼಸಿ.ಎಂ.ಇಬ್ರಾಹಿಂ ಈಗ ಫ್ರೀ ಇದ್ದಾರೆ, ಏನು ಬೇಕಾದರೂ ಮಾತನಾಡಲಿ. ಉಚ್ಚಾಟನೆಯಾದರೂ ಮಾಡಲಿ, ಏನಾದರೂ ಮಾಡಿಕೊಳ್ಳಲಿ ಅವರಿಗೆ ಬಿಟ್ಟಿದ್ದು. ನಾವು ಎಲ್ಲವನ್ನೂ ಸರಿ ಮಾಡುತ್ತೇವೆ. ನಮ್ಮ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆʼ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News