×
Ad

ರಾಜ್ಯದ ಏಳು ಮಂದಿ ಸಂಸದರು ಪುನರಾಯ್ಕೆ

Update: 2024-06-04 21:00 IST

ಬೆಂಗಳೂರು : ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, 2019ರ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಪ್ರವೇಶಿಸಿದ್ದ ಏಳು ಮಂದಿ ಸಂಸದರು ಈ ಬಾರಿಯೂ ಪುನರಾಯ್ಕೆಯಾಗಿದ್ದಾರೆ.

ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ರಮೇಶ್ ಜಿಗಜಿಣಗಿ, ಪ್ರಹ್ಲಾದ್ ಜೋಶಿ, ಬಿ.ವೈ.ರಾಘವೇಂದ್ರ, ಪಿ.ಸಿ.ಗದ್ದಿಗೌಡರ್ ಲೋಕಸಭೆಯ ಸದಸ್ಯರಾಗಿ ಪುನರಾಯ್ಕೆಯಾಗಿದ್ದು, ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

‘ದೇಶದ ಜನತೆ ಕೋಮುವಾದ, ವಿಭಜಕ ಶಕ್ತಿ ಮತ್ತು ಶೂನ್ಯ ಅಭಿವೃದ್ಧಿಗಳ ವಿರುದ್ಧ ತೀರ್ಪು ನೀಡಿದ್ದು, ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಸರ್ವಾಧಿಕಾರ ವಿರುದ್ಧ ಜನತೆ ಮತ ಚಲಾಯಿಸಿದ್ದಾರೆ. ಈ ಚುನಾವಣೆ ಸಂವಿಧಾನದ ಪರ ಮತ್ತು ವಿರೋಧದ ಶಕ್ತಿಗಳ ಪ್ರಶ್ನೆಯಾಗಿದ್ದು, ಸಂವಿಧಾನದ ಪರ ಶಕ್ತಿಗಳು ಗೆದ್ದಿವೆ. ಮುಂದಿನ ದಿನಗಳಲ್ಲಿ ಸಂವಿಧಾನವನ್ನು ಗಟ್ಟಿಗೊಳಿಸುವ ಕೆಲಸವನ್ನು ಮುಂದುವರಿಸುವ ಮೂಲಕ ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮುಂದುವರಿಯಬೇಕಿದೆ’

-ಪ್ರೊ.ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News