×
Ad

ಮೈಕ್ರೋ ಫೈನಾನ್ಸ್ ವಿಧೇಯಕ ಪರಿಷತ್‍ನಲ್ಲೂ ಅಂಗೀಕಾರ

Update: 2025-03-13 21:49 IST

ಬೆಂಗಳೂರು : ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ ‘ಕರ್ನಾಟಕ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ’ವು ಗುರುವಾರ ವಿಧಾನಪರಿಷತ್‍ನಲ್ಲಿ ಅಂಗೀಕಾರವಾಯಿತು.

ಈ ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದರು. ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಎಸ್. ನವೀನ್, ಐವಾನ್ ಡಿಸೋಜ, ಪ್ರದೀಪ್ ಶೆಟ್ಟರ್, ಸಿ.ಟಿ. ರವಿ, ಗೋವಿಂದರಾಜು,  ಉಮಾಶ್ರೀ, ಡಿ.ಎಸ್. ಅರುಣ್ ಎನ್. ರವಿಕುಮಾರ್, ಕೇಶವ ಪ್ರಸಾದ್, ಎಂ.ನಾಗರಾಜು, ಬಿಲ್ಕೀಸ್ ಭಾನು, ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾಧಿ ನಾರಾಯಣಸ್ವಾಮಿ ಅವರುಗಳು ಪರ್ಯಾಲೋಚಿಸಿದ ನಂತರ ಈ ವಿಧೇಯಕವು ಒಮ್ಮತದಿಂದ ಸದನದಲ್ಲಿ ಅಂಗೀಕಾರವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News