×
Ad

ಜೈನ ಸಮುದಾಯದವರಿಗೆ ‘ಅಲ್ಪಸಂಖ್ಯಾತರ ಪ್ರಮಾಣ ಪತ್ರ’: ಸುತ್ತೋಲೆ

Update: 2023-09-16 22:17 IST

ಬೆಂಗಳೂರು, ಸೆ. 16: ರಾಜ್ಯದಲ್ಲಿರುವ ಜೈನ ಸಮುದಾಯದ ‘ದಿಗಂಬರ ಹಾಗೂ ಶ್ವೇತಾಂಬರ’ರಿಗೆ ‘ಅಲ್ಪಸಂಖ್ಯಾತರ ಪ್ರಮಾಣ ಪತ್ರ’ ನೀಡುವ ಕುರಿತು ಮಾರ್ಗಸೂಚಿ ಪ್ರಕಟಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ನಾಗರಾಜ ಶನಿವಾರ ಸುತ್ತೋಲೆ ಹೊರಡಿಸಿದ್ದಾರೆ.

ಅಲ್ಪಸಂಖ್ಯಾತರ ಪುಮಾಣ ಪತ್ರವು ಮತೀಯ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಸಂಬಂಧಿಸಿರುವುದರಿಂದ ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ. ಶಾಲೆಯ ದಾಖಲೆಗಳಾದ ಅಂಕಪಟ್ಟಿ/ಟಿಸಿಯಲ್ಲಿ ನಮೂದಿಸಿರುವ ಹಸರು ಅಥವಾ ಉಪನಾಮದೊಂದಿಗೆ ‘ಜೈನ್’ ಎಂದು ಇದ್ದಲ್ಲಿ ಈ ದಾಖಲೆಗಳ ಆಧಾರದ ಮೇಲೆ ಅಲ್ಪಸಂಖ್ಯಾತರ ಪುಮಾಣ ಪತ್ರವನ್ನು ತಹಶೀಲ್ದಾರ್ ನೀಡಬಹುದು.

ಶಾಲೆಯ ದಾಖಲೆಗಳಾದ ಅಂಕಪಟ್ಟಿ/ಟಿಸಿಯಲ್ಲಿ ನಮೂದಿಸಿರುವ ಹೆಸರು-ಉಪನಾಮದೊಂದಿಗೆ ಜೈನ್ ಎಂದು ಇಲ್ಲದಿದ್ದಲ್ಲಿ ಸರಕಾರ ನೀಡಿರುವ ಅಧಿಕೃತ ದಾಖಲೆಗಳಲ್ಲಿ ನಮೂದಿಸಿರುವ ಹೆಸರು-ಉಪನಾಮದೊಂದಿಗೆ ಜೈನ್ ಎಂದು ಇದ್ದಲ್ಲಿ ಈ ದಾಖಲೆಗಳ ಆಧಾರದ ಮೇಲೆ ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ತಹಶೀಲ್ದಾರ್ ನೀಡಬಹುದು. ದಾಖಲೆ ಲಭ್ಯವಿಲ್ಲದಿದ್ದರೆ ಅಭ್ಯರ್ಥಿಯು 20ರೂ.  ಸ್ವಯಂ ದೃಢೀಕರಣ(Notary Attested)ದೊಂದಿಗೆ ನೋಂದಾಯಿತ ಸಮುದಾಯದ ಸಂಘಟನೆಗಳ ಶಿಫಾರಸ್ಸು ಪತ್ರ ನೀಡಿ ಪ್ರಮಾಣಪತ್ರ ಪಡೆಯಬಹುದು ಎಂದು ತಿಳಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News