×
Ad

ಮೋದಿ ಪ್ರಧಾನ ಮಂತ್ರಿಯೋ ಪ್ರಚಾರ ಮಂತ್ರಿಯೋ: ಕಾಂಗ್ರೆಸ್

Update: 2023-07-24 16:57 IST

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ ಯೋಜನೆಗಳ ಪ್ರಚಾರಕ್ಕಾಗಿ ವ್ಯಯಿಸಿರುವ ಹಣದ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

2018ರಿಂದ 2023ರ ವರೆಗೆ ಮೋದಿ ಫೋಟೋ ತೋರಿಸಲು ಖರ್ಚು ಮಾಡಿದ್ದು ಬರೋಬ್ಬರಿ 3,064 ಕೋಟಿ ರೂ. ಜನರ ಬೆವರಿನ ಹಣವನ್ನು ತನ್ನ ಪ್ರಚಾರಕ್ಕೆ ಬಳಸುವ ಮೋದಿಯನ್ನು ಪ್ರಧಾನಮಂತ್ರಿ ಎನ್ನಬೇಕೋ, ಪ್ರಚಾರಮಂತ್ರಿ ಎನ್ನಬೇಕೋ? ಎಂದು ಪ್ರಶ್ನಿಸಿದೆ.

ಯಾವುದೇ ಸಾಧನೆ, ಯೋಜನೆ ಇಲ್ಲದೆ ಕೇವಲ ಪ್ರಚಾರವನ್ನೇ ನಂಬಿರುವ ಬಿಜೆಪಿಯ ಕೇಂದ್ರ ಸರ್ಕಾರ ಈ ಬಾರಿ ಜನರಿಂದ ತಿರಸ್ಕಾರಕ್ಕೆ ಒಳಗಾಗುವುದು ನಿಶ್ಚಿತ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News