×
Ad

ಮೂಡಿಗೆರೆ | ಕಾರ್ಯಾಚರಣೆ ವೇಳೆ ಅಟ್ಟಿಸಿಕೊಂಡು ಬಂದ ಕಾಡಾನೆ; ಕೂದಲೆಳೆ ಅಂತರದಲ್ಲಿ ಪಾರಾದ ಅರಣ್ಯ ಅಧಿಕಾರಿಗಳು

Update: 2023-08-08 00:13 IST

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಮೇಗೂರಿನ ಅತ್ತಿಗುಣಿ ಹರದಲ್ಲಿ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅಟ್ಟಿಸಿಕೊಂಡು ಬಂದಿದ್ದು ಅರಣ್ಯ ಅಧಿಕಾರಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಇತ್ತೀಚೆಗೆ ಮಲೆಮನೆ ಮೇಗೂರು ಆಲೇಕಾನ್ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಇಲ್ಲಿ ಅರಣ್ಯ ಅಧಿಕಾರಿಗಳು ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆಗಿಳಿದಿದ್ದರು. 

ಕಾರ್ಯಾಚರಣೆ ನಡೆಸುವ ವೇಳೆ ಮೇಗೂರಿನ ಅತ್ತಗುಣಿ ಸಮೀಪ ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು, ಅರಣ್ಯ ಅಧಿಕಾರಿಗಳು ಕೂದಲೆಳೆಯಲ್ಲಿ ಪಾರಾಗಿದ್ದಾರೆ.

ʼʼಕಾಡಾನೆಯೊಂದು ಗ್ರಾಮದ ಸುತ್ತಮುತ್ತ ಬೀಡು ಬಿಟ್ಟಿದ್ದು ಕಾರ್ಯಾಚರಣೆಗೆ ತೆರಳಿದ ಅಧಿಕಾರಿಗಳನ್ನೇ ಅಟ್ಟಿಸಿಕೊಂಡು ಬಂದಿದೆ. ಈ ಪುಂಡಾನೆಯನ್ನು ಆದಷ್ಟು ಬೇಗ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳ ಬೇಕುʼʼ ಎಂದು ಗ್ರಾಮಸ್ಥರೊಬ್ಬರು ಒತ್ತಾಯಿಸಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News