×
Ad

ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಶಾಲಾ ವಾಹನ ಚಲಾಯಿಸಿದ್ದ ಚಾಲಕನ ಬಂಧನ

Update: 2023-09-15 00:30 IST

ರಾಮನಗರ, ಸೆ.​ 14: ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ಶಾಲಾ ವಾಹನ ಚಲಾಯಿಸಿದ್ದ ಚಾಲಕನನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್​ ತಿಳಿಸಿದ್ದಾರೆ.

ಈ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್​ ಟ್ವೀಟ್​ ಮಾಡಿದ್ದು, ʼʼವೈರಲ್​ ಆಗುತ್ತಿರುವ ವೀಡಿಯೊ ಹಳೆಯದ್ದಾಗಿದೆ. ಘಟನೆ ನಡೆದ ತಕ್ಷಣ ಶಾಲಾ ಮಂಡಳಿ ಚಾಲಕನ ವಿರುದ್ದ ಕ್ರಮಕೈಗೊಂಡಿದೆ. ಎರಡು ತಿಂಗಳ ಹಿಂದೆಯೇ ಚಾಲಕನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.  ನಿನ್ನೆ ಎಫ್ಐಆರ್ ದಾಖಲಿಸಿದ್ದು, ಇಂದು ಚಾಲಕನನ್ನು ಬಂಧಿಸಿ, ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News