×
Ad

NDAನೂ ಇಲ್ಲ, INDIAನೂ ಇಲ್ಲ: ಮೈತ್ರಿ ವದಂತಿಗೆ ತೆರೆ ಎಳೆದ ಎಚ್ ಡಿ ದೇವೇಗೌಡ

Update: 2023-07-21 10:53 IST
ಫೈಲ್ ಚಿತ್ರ

ಬೆಂಗಳೂರು, ಜು. 21:ಬಿಜೆಪಿ ಹಾಗೂ ಜೆಡಿಎಸ್, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಊಹಾಪೋಹಗಳಿಗೆ ಕೊನೆಗೂ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ತೆರೆ ಎಳೆದಿದ್ದಾರೆ.

ಗುರುವಾರ ತಡ ರಾತ್ರಿ ಶಾಸಕರ ಜೊತೆ ಮಹತ್ವದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''NDAನೂ ಇಲ್ಲ, INDIAನೂ ಇಲ್ಲ. ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ ನಾವು ಹೋರಾಟ ಮಾಡಲಿದ್ದೇವೆ'' ಎಂದು ಸ್ಪಷ್ಟಪಡಿಸಿದರು. 

''ರಾಜ್ಯ ಸರಕಾರ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರಕ್ಕೆ ಕುಮಾರಸ್ವಾಮಿ ಒಂದು ಟ್ವೀಟ್ ಮಾಡಿದ್ದರು. ಈ ವಿಚಾರವನ್ನೇ ಸದನದಲ್ಲಿಟ್ಟು ಬಿಜೆಪಿ ಹೋರಾಟ ಮಾಡಿತ್ತು. ಹೀಗಾಗಿ ಬಿಜೆಪಿ, ಜೆಡಿಎಸ್ ಒಂದಾಗಿದೆ ಅಂತಾ ಕಾಂಗ್ರೆಸ್‌ ಬಿಂಬಿಸಿತ್ತು. ಬಿಜೆಪಿಗೆ ಸಂಖ್ಯಾ ಬಲ ಇದೆ, ಅವರು ಕುಮಾರಸ್ವಾಮಿ ಟ್ವೀಟ್ ಅಂಶವನ್ನ ಇಟ್ಟಕೊಂಡು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಜೆಡಿಎಸ್ ಬಿಜೆಪಿ ಮಧ್ಯೆ ಯಾವುದೇ ಸಂಬಂಧ ಕಲ್ಪಿಸಬೇಡಿ. ನಮ್ಮ ಹೋರಾಟ ನಾವು ಮಾಡುತ್ತೇವೆ'' ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News