ನಮ್ಮ ಸರಕಾರ ಪ್ರಚೋದನೆ ಮಾಡುವವರ ಬಾಯಿಗೆ ಹೊಲಿಗೆ ಹಾಕುವುದು ನಿಶ್ಚಿತ: ಕಾಂಗ್ರೆಸ್
ಬೆಂಗಳೂರು, ಅ. 3: ‘ಈ ಹಿಂದೆ ಬಿಜೆಪಿಯ ಸಂಸದರು, ಶಾಸಕರು ತಲ್ವಾರ್, ಬಂದೂಕು ಹಿಡಿದು ಮೆರವಣಿಗೆ ಮಾಡಿದ್ದರು, ಆಗ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಖಡ್ಗ, ಬಂದೂಕು ಹಿಡಿಯುವುದು ಸಂಪ್ರದಾಯ ಎಂದು ಬಂಡತನದಲ್ಲಿ ಸಮರ್ಥಿಸಿದ್ದರು’ ಎಂದು ಕಾಂಗ್ರೆಸ್ ಟೀಕಿಸಿದೆ
ಮಂಗಳವಾರ ಎಕ್ಸ್‍ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆಯಾಗುವುದನ್ನು ಬಿಜೆಪಿ ಬಯಸಿತ್ತು, ಆದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೆÇಲೀಸರು ಯಶಸ್ವಿಯಾಗಿದ್ದಾರೆ. ಇಂತಹ ಘಟನೆಗಳು ಬಿಜೆಪಿಗರ ದ್ವೇಷ, ಪ್ರಚೋದನಕಾರಿ ಭಾಷಣದ ಪರಿಣಾಮದಿಂದಲೇ ಸೃಷ್ಟಿಯಾಗಿವೆ. ನಮ್ಮ ಸರಕಾರ ಕಾನೂನಿನ ಮೂಲಕ ಪ್ರಚೋದನೆ ಮಾಡುವವರ ಬಾಯಿಗೆ ಹೊಲಿಗೆ ಹಾಕುವುದು ನಿಶ್ಚಿತ’ ಎಂದು ಎಚ್ಚರಿಕೆ ನೀಡಿದೆ.
‘ಬಿಜೆಪಿ ಆಡಳಿತದಲ್ಲಿ ಬಿಜೆಪಿಯೇ ಪ್ರಾಯೋಜಿಸಿದ ಗಲಭೆಗಳಲ್ಲಿ ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ತಲ್ವಾರ್, ಬಂದೂಕುಗಳ ಮೆರವಣಿಗೆಗಳನ್ನು ಗೃಹಸಚಿವರೇ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಡಿಜಿಐಜಿಪಿ ಅಭಿಪ್ರಾಯವನ್ನು ಬದಿಗೊತ್ತಿ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಶಾಂತಿ ಭಂಜಕರಿಗೆ ಬೆಂಬಲಿಸಲಾಗಿತ್ತು. ಶಿವಮೊಗ್ಗದ ಹರ್ಷ ಕೊಲೆಗಡುಕರಿಗೆ ಜೈಲಿನಲ್ಲಿ ಮೋಜಿನ ವ್ಯವಸ್ಥೆ ಕಲ್ಪಿಸಿತ್ತು ಬಯಲಾಗಿತ್ತು. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದ್ದು ಏಕೆ ಎನ್ನುವುದನ್ನು ಬಿಜೆಪಿ ಉತ್ತರಿಸಲಿ’ ಎಂದು ಕಾಂಗ್ರೆಸ್ ಸವಾಲು ಹಾಕಿದೆ.