×
Ad

ಪ್ರಿಯಾಂಕ್‌ ಖರ್ಗೆ ಕಾಣೆಯಾಗಿದ್ದಾರೆ; ದಯವಿಟ್ಟು ಹುಡುಕಿ ಕೊಡಿ ಎಂದು ಪೋಸ್ಟರ್‌ ಹಂಚಿಕೊಂಡ BJP

Update: 2023-10-18 19:38 IST

ಬಿಜೆಪಿ ಹಂಚಿಕೊಂಡಿರುವ ಪೋಸ್ಟರ್

ಬೆಂಗಳೂರು: ʻರಾಜ್ಯದಲ್ಲಿ ನಕಲಿ ಪತ್ರಗಳ ಹಾವಳಿ ಜಾಸ್ತಿಯಾದರೂ ಮಾಯವಾಗಿರುವ ಸತ್ಯ ಸಂಶೋಧನಾ ಮಂತ್ರಿಯನ್ನು ಹುಡುಕಿಕೊಟ್ಟವರನ್ನು ಸತ್ಯ ಸಂಶೋಧನಾ ತಂಡಕ್ಕೆ ನೇಮಿಸಲಾಗುವುದುʻ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರವುಳ್ಳ ಪೋಸ್ಟರ್‌ ಅನ್ನು ರಾಜ್ಯ ಬಿಜೆಪಿ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. 

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಾಗೂ ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರ ಬಳಿಕ ಇದೀಗ ಪ್ರಿಯಾಂಕ್‌ ಖರ್ಗೆ ಅವರ ಪೋಸ್ಟರ್‌ ಅನ್ನು ಎಕ್ಸ್‌ ಖಾತೆಯಲ್ಲಿ ಬಿಡುಗಡೆ ಮಾಡಿರುವ ಬಿಜೆಪಿ, ʻʻಡಿಯರ್‌ ಕಾಂಗ್ರೆಸ್, ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್‌ ಖರ್ಗೆ ಅವರು ಕಾಣೆಯಾಗಿದ್ದಾರೆʻʻ ಎಂದು ಹೇಳಿದೆ.

ʻʻಕಾಂಗ್ರೆಸ್‌ನ ದುರಾಡಳಿತಕ್ಕೆ ಬೇಸತ್ತ ಗ್ರಾಮವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿ ಕೊಡಿ!ʻʻ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News