×
Ad

ಸಂಘ ಪರಿವಾರ ಸುಳ್ಳಿನ ಕಾರ್ಖಾನೆ: ಸಿಎಂ ಸಿದ್ದರಾಮಯ್ಯ

Update: 2023-12-17 17:56 IST

ಗದಗ: ಬಿಜೆಪಿ, ಸಂಘ ಪರಿವಾರದ ಎಬಿವಿಪಿ, ಬಜರಂಗ ದಳ, ಯುವ ಮೋರ್ಚಾ ಎಲ್ಲವು ಸುಳ್ಳಿನ ಕಾರ್ಖಾನೆಗಳು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದ ತೊಂದರೆಯಾಗುತ್ತಿದೆ ಎಂದು ಬಿಜೆಪಿಯ ವಿದ್ಯಾರ್ಥಿ ಸಂಘನೆ ಎಬಿವಿಪಿ ಆರೋಪಿಸುತ್ತಿದೆ. ಸುಳ್ಳು ಹೇಳುವುದೇ ಅವರ ಕೆಲಸ ಎಂದರು.

ಹಿಂದೂ ರಾಷ್ಟ್ರ ಬಿಜೆಪಿ ಸಿದ್ದಾಂತ: ಭಾರತ ಉಳಿಯಬೇಕೆಂದರೆ ಹಿಂದೂ ರಾಷ್ಟವಾಗಬೇಕು ಎಂದು ಪೇಜಾವರ ಶ್ರೀ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಬಿಜೆಪಿಯ ಘೋಷವಾಕ್ಯ. ಹಿಂದೂ ರಾಷ್ಟ್ರ ವಾಗಬೇಕೆಂದು ಜನಸಂಘ 1950ರಲ್ಲಿ ಪ್ರಾರಂಭವಾದಾಗಲೇ ಹೇಳಿದ್ದರು ಎಂದರು.

ನಮ್ಮ ದೇಶದಲ್ಲಿ ಬರೀ ಹಿಂದೂಗಳಲ್ಲ ಕ್ರಿಶ್ಚಿಯನ್, ಮುಸ್ಲಿಂ, ಜೈನರು, ಬೌದ್ಧರು ಇದ್ದಾರೆ. ನಮ್ಮ ದೇಶ ಬಹುತ್ವದ ದೇಶ. ಬರೀ ಹಿಂದುಗಳ ರಾಷ್ಟ್ರ ಮಾಡಿದರೆ ಆಗೋಲ್ಲ. ಅದು ಬಿಜೆಪಿಯ ಸಿದ್ದಾಂತ. ದೇಶವನ್ನು ಹಿಂದೂಗಳ ರಾಷ್ಟ್ರ ಮಾಡೋಕ್ಕೆ ಆಗೋಲ್ಲ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News