ಹಿರಿಯ ಕಾರ್ಮಿಕ ಮುಖಂಡ ಅನಂತ್ ಸುಬ್ಬರಾವ್ ನಿಧನ
Update: 2026-01-28 19:42 IST
ಬೆಂಗಳೂರು: ಹಿರಿಯ ಕಾರ್ಮಿಕ ಮುಖಂಡ, ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ್ ಸುಬ್ಬರಾವ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
AITUC ಸಂಘಟನೆಯಲ್ಲಿ ಸುರ್ಧೀರ್ಘ ಸೇವೆ ಸಲ್ಲಿಸಿದ್ದ ಅನಂತ್ ಸುಬ್ಬರಾವ್, ಕಳೆದ 40 ವರ್ಷದಿಂದ ನೌಕರರ ಪರವಾಗಿ ಹೋರಾಟ ನಡೆಸುತ್ತಿದ್ದರು.
ಈಗ ಪಾರ್ಥಿವ ಶರೀರ ವಿಜಯನಗರದ ಅವರ ನಿವಾಸದಲ್ಲಿದೆ ಎಂದು ತಿಳಿದು ಬಂದಿದೆ.