×
Ad

ಏಳು ಸಾವಿರ ಶಾಲಾ ಕೊಠಡಿಗಳ ದುರಸ್ತಿಗೆ 96.88 ಕೋಟಿ ರೂ. ಮಂಜೂರು ಮಾಡಿದ ರಾಜ್ಯ ಸರಕಾರ

Update: 2026-01-28 22:55 IST

ಬೆಂಗಳೂರು, ಜ.28: ರಾಜ್ಯ ಸರಕಾರವು 2,819 ಸರಕಾರಿ ಶಾಲೆಗಳ ಒಟ್ಟು 7,293 ತರಗತಿ ಕೊಠಡಿಗಳ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲು 96.88 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

2,819 ಸರಕಾರಿ ಶಾಲೆಗಳ 4,163 ತರಗತಿ ಕೊಠಡಿಗಳ ಸಣ್ಣ ಪ್ರಮಾಣದ ದುರಸ್ತಿ ಕಾಮಗಾರಿಗಳಿಗೆ 44.30 ಕೋಟಿ ರೂ.ಗಳನ್ನು ಮತ್ತು 3,130 ತರಗತಿ ಕೊಠಡಿಗಳ ದೊಡ್ಡ ಪ್ರಮಾಣ ದುರಸ್ತಿಯ ಕಾಮಗಾರಿಗಳಿಗೆ 52.58 ಕೋಟಿ ರೂ.ಗಳು ಸೇರಿ ಒಟ್ಟು 7,293 ತರಗತಿ ಕೊಠಡಿಗಳ ದುರಸ್ತಿಗೆ 96.88 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.

ಉದ್ದೇಶಿತ ಎಲ್ಲಾ ದುರಸ್ತಿ ಕಾಮಗಾರಿಗಳನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ ಮೂಲಕ ಕೆ.ಟಿ.ಪಿ.ಪಿ-1999 ಕಾಯ್ದೆ ಮತ್ತು ನಿಯಮಗಳ ಪ್ರಕಾರ ಪಾರದರ್ಶಕ ಜಿಲ್ಲಾ ಹಂತದ ಟೆಂಡರ್ ಮೂಲಕ ಜಿಲ್ಲಾ ಪಂಚಾಯತ್‍ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News