×
Ad

ಬೆಂಗಳೂರು| ನಾಲ್ಕು ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: 10 ಮಂದಿ ಆರೋಪಿಗಳ ಬಂಧನ

Update: 2026-01-28 23:09 IST

ಬೆಂಗಳೂರು, ಜ.28: ಇಲ್ಲಿನ ಅಮೃತಹಳ್ಳಿ ಪೊಲೀಸರು 4 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದು, ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ಇಂಜಿನಿಯರ್‌ಗಳು, ಕಾನೂನು ವಿದ್ಯಾರ್ಥಿ, ಬೌನ್ಸರ್ ಸೇರಿ 10 ಮಂದಿ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ಕೋಗಿಲು ಲೇಔಟ್‍ನ ಎರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಕುಶಾಲ್‍ಗೌಡ(23), ರಾಜಾನುಕುಂಟೆಯ ಕಾನೂನು ವಿದ್ಯಾರ್ಥಿ ಶಶಾಂಕ್(28), ಮರಳವಾಡಿಯ ಬೌನ್ಸರ್ ಸಾಗರ್(29), ದೊಡ್ಡಕಮ್ಮನಹಳ್ಳಿಯ ಕ್ಯಾಬ್ ಚಾಲಕ ವಿಲ್ಸನ್.ಎಸ್(48), ಅಕ್ಷಯನಗರದ ಆಶಿರ್ ಅಲಿ(36), ರಿಯಾಸ್(38), ಬೇಗೂರಿನ ಸಜಾದ್(34) ಎಲೆಕ್ಟ್ರಾನಿಕ್ ಸಿಟಿಯ ಶಿಹಾಬ್.ಕೆ.ಪಿ(30), ದೊಡ್ಡಗಮ್ಮನಹಳ್ಳಿಯ ಅಬ್ದುಲ್ ನಾಸಿರ್(28) ದೇವರಾಜ ಅರಸು ನಗರದ ಸಾಫ್ಟ್‌ವೇರ್‌ ಇಂಜಿನಿಯರ್ ಅಭಿನವ್ ಡಿ.(21) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಆರೋಪಿಗಳಿಂದ 36 ಸಾವಿರ ರೂ. ನಗದು, 3 ಕೆ.ಜಿ ಹೈಡೋ ಗಾಂಜಾ, 50 ಗ್ರಾಂ ಎಂಡಿಎಂಎ, 500 ಗ್ರಾಂ ಚರಸ್, 500 ಎಲ್‍ಎಸ್ ಡಿ ಸ್ಟ್ರಿಪ್ಸ್ ಗಳು, 10 ಕೆಜಿ ಗಾಂಜಾ, 2 ಕಾರುಗಳು, 14 ಮೊಬೈಲ್ ಗಳು ಸೇರಿ 4 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News