×
Ad

ಶಿವಮೊಗ್ಗ: ರಾಗಿಗುಡ್ಡ ಗಲಭೆ ಪ್ರಕರಣದ ವೇಳೆ ಕರ್ತವ್ಯ ಲೋಪ ಆರೋಪ; ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ, ಮೂವರು ಸಿಬ್ಬಂದಿ ಅಮಾನತು

Update: 2023-10-09 10:58 IST

ಶಿವಮೊಗ್ಗ: ಶಿವಮೊಗ್ಗ ರಾಗಿಗುಡ್ಡ ಗಲಭೆ ಪ್ರಕರಣದ ವೇಳೆ ಕರ್ತವ್ಯ ಲೋಪದ ಎಸೆಗಿದ್ದ ಆರೋಪದ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮತ್ತು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯ ಸಿಪಿಐ ಅಭಯ್ ಪ್ರಕಾಶ್ ಸಿಬ್ಬಂದಿಗಳಾದ ಕಾಶಿನಾಥ್, ರಂಗನಾಥ್ ಮತ್ತು ಶಿವರಾಜ್ ಅಮಾನತ್ತು ಮಾಡಲಾಗಿದೆ.

ಅ.1 ರಂದು ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ ಹಾಗೂ ಇದಕ್ಕೂ ಮೊದಲು ಫ್ಲೆಕ್ಸ್ ವಿಚಾ ಗಲಾಟೆ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News