×
Ad

ಶಿವಮೊಗ್ಗ: ಗೋಪೂಜೆ ವೇಳೆ ಚಿನ್ನದ ಸರ ನುಂಗಿದ ಹಸು; ಶಸ್ತಚಿಕಿತ್ಸೆ ಮೂಲಕ ಸರವನ್ನು ಹೊರ ತೆಗೆದ ಪಶು ವೈದ್ಯ

Update: 2023-11-28 13:58 IST

ಶಿವಮೊಗ್ಗ: ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ನುಂಗಿದ ಹಸುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಸರವನ್ನು ಹೊರತೆಗೆದ ಘಟನೆ ಹೊಸನಗರ ತಾಲೂಕಿನ ಮತ್ತಿಮನೆಯಲ್ಲಿ ಭಾನುವಾರ ನಡೆದಿದೆ.

ಗೋಪೂಜೆಗೆ ನಂತರ ಇಟ್ಟಿದ್ದ ಸರ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಡೀ ಮನೆ ತುಂಬಾ ಹುಡುಕಾಡಿದ್ದರು. ಆದರೆ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂದು ಕುಟುಂಬಸ್ಥರು ಆ ನಂತರ ಖಚಿತಪಡಿಸಿಕೊಂಡಿದ್ದರು.

ಬಂಗಾರ ಹೋದರೆ ಹೋಗಲಿ ಎಂದು ಮನೆಮಂದಿ ಸುಮ್ಮನಾಗಿದ್ದರು. ಆದರೆ ಬಂಗಾರ ನುಂಗಿದ ದಿನದಿಂದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಇದು ಹಸುವಿನ ಪ್ರಾಣಕ್ಕೆ ಕುತ್ತು ತರಬಹುದು ಎಂದು ಭಯಪಟ್ಟ ಮನೆಯವರು ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದರು.

ಪಶುವೈದ್ಯರು ಸ್ಥಳಕ್ಕೆಆಗಮಿಸಿ ರವಿವಾರ ಯಶಸ್ವಿ ಶಸ್ತಚಿಕಿತ್ಸೆ ಮಾಡುವ ಮೂಲಕ ಬಂಗಾರದ ಸರವನ್ನು ಹೊರ ತೆಗೆದಿದ್ದಾರೆ. ಸದ್ಯ ಹಸುವಿನ ಆರೋಗ್ಯ ಸ್ಥಿರವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News