×
Ad

RSS​ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ:‌ ಸಚಿವ ಪ್ರಿಯಾಂಕ್ ಖರ್ಗೆ

Update: 2023-09-16 12:35 IST

ಕಲಬುರಗಿ: ʼಆರೆಸ್ಸೆಸ್​ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ. ಅದರ ತತ್ವ ಪ್ರಜಾಪ್ರಭುತ್ವ ವಿರೋಧಿ, ದೇಶ‌ ವಿರೋಧಿಯಾಗಿದೆʼ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಶನಿವಾರ ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ʼʼ ಆರೆಸ್ಸೆಸ್ ನಿಂದ ಉದ್ಯೋಗ ಸಿಗಲ್ಲ. ಸಮಾಜಕ್ಕೆ ಅದರಿಂದ ಏನೂ ಪ್ರಯೋಜನ ಇಲ್ಲ, ದೇಶಭಕ್ತಿಯೂ ಇಲ್ಲ. ನಾನೇನು ಆರೆಸ್ಸೆಸ್ ಬಗ್ಗೆ ಮಾತನಾಡಲು ಭಯ ಪಡುವುದಿಲ್ಲ. ಅದರ ತತ್ವ ನಂಬಿ ಯಾರು ಉದ್ಧಾರ ಆಗಿಲ್ಲʼʼ ಎಂದು ಹೇಳಿದರು. 

ʼʼಸರಕಾರದ ಶೈಕ್ಷಣಿಕ ಕೇಂದ್ರಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ, ಸಂವಿಧಾನದ ಪ್ರಕಾರ ಯಾವುದೇ ಕಾರ್ಯಕ್ರಮಗಳನ್ನು ಮಾಡಲಿ. ಅದನ್ನು ಬಿಟ್ಟು ಕೇಸರಿಕರಣ ಮಾಡೋದಾದರೆ ಅದು ನಡೆಯಲ್ಲ. ಆರೆಸ್ಸೆಸ್‌ ನವರಿಗೆ ಅಷ್ಟೊಂದು ಆಸಕ್ತಿ ಇದ್ದರೆ ಶೈಕ್ಷಣಿಕ ಸಂಸ್ಥೆಗಳನ್ನು ಖಾಸಗಿಯಾಗಿ ನಡೆಸಲಿʼʼ ಎಂದು ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News