‘ಮಾತನಾಡುವವರು ಹೊರಗೆ ಹೋಗಿ ಮಾತನಾಡಿ’ : ಸಚಿವರ ವಿರುದ್ದ ಸ್ಪೀಕರ್ ಖಾದರ್ ಗರಂ
ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು : ಸಂತಾಪ ಸೂಚನೆ ನಿರ್ಣಯದ ಮೇಲೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಗಿ ಸದಸ್ಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿದ ಸ್ಪೀಕರ್ ಯು.ಟಿ.ಖಾದರ್, ‘ಮಾತನಾಡುವವರು ಹೊರಗೆ ಹೋಗಿ ಮಾತನಾಡಿ’ ಎಂದು ತಾಕೀತು ಮಾಡಿದ ಪ್ರಸಂಗ ನಡೆಯಿತು.
ಸೋಮವಾರ ಬೆಳಗ್ಗೆ ಸ್ಪೀಕರ್ ಖಾದರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲು ಎದ್ದುನಿಂತರು. ಈ ವೇಳೆ ಸಚಿವ ಶಿವರಾಜ್ ತಂಗಡಿ ಅವರು ಸದಸ್ಯರೊಬ್ಬರ ಜತೆ ಮಾತನಾಡುತ್ತಿದ್ದರು. ಅದನ್ನು ಗಮನಿಸಿದ ಸ್ಪೀಕರ್ ಖಾದರ್, ‘ಇಲ್ಲಿ ಸಂತಾಪ ಸೂಚನೆ ಚರ್ಚೆ ನಡೆಯುತ್ತಿದೆ. ದುಃಖದ ವಿಚಾರ ಪ್ರಸ್ತಾಪ ಆಗುತ್ತಿರುವಾಗ ಸಚಿವರು ಮಾತನಾಡುತ್ತಾ ಕೂತರೆ ಹೇಗೆ? ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಶಿವರಾಜ್ ತಂಗಡಗಿ ಅವರನ್ನು ಬಾರಪ್ಪ ನಿನ್ನ ಆಸನದಲ್ಲಿ ಕುಳಿತುಕೋ’ ಎಂದರು. ಕೂಡಲೇ ಸಚಿವ ತಂಗಡಗಿ ತಮ್ಮ ಸ್ಥಾನಕ್ಕೆ ಧಾವಿಸಿದರು. ಈ ವೇಳೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ‘ಸಂಸ್ಕೃತಿ ಇಲಾಖೆ ಸಚಿವರು’ ಎಂದು ಛೇಡಿಸಲು ಮುಂದಾದಾಗ ಸಿಎಂ, ನಿಮ್ಮದು ಇರಲಿ ಎಂದು ಎಂದು ತೆರೆ ಎಳೆದರು.