ರಾಜ್ಯಾದ್ಯಂತ 12 ಲಕ್ಷಕ್ಕೂ ಅಧಿಕ ಕುಟುಂಬಗಳ ಸಮೀಕ್ಷೆ ಪೂರ್ಣ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.27 : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಇಲ್ಲಿಯವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 12,87,087 ಕುಟುಂಬಗಳ ಸಮೀಕ್ಷೆಯು ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.
ಬಾಗಲಕೋಟೆ ಜಿಲ್ಲೆಯ 55,459, ಬಳ್ಳಾರಿ 27,799, ಬೆಳಗಾವಿ 96,167, ಬೆಂಗಳೂರು ಗ್ರಾಮಾಂತರ 22,984, ಬೆಂಗಳೂರು ದಕ್ಷಿಣ 32,610, ಬೆಂಗಳೂರು ನಗರ 9,586, ಬೀದರ್ 26,345, ಚಾಮರಾಜನಗರ 24,688, ಚಿಕ್ಕಬಳ್ಳಾಪುರ 28,845, ಚಿಕ್ಕಮಗಳೂರು 41,634, ಚಿತ್ರದುರ್ಗ 55,531, ದಕ್ಷಿಣ ಕನ್ನಡ 24,309, ದಾವಣಗೆರೆ ಜಿಲ್ಲೆಯ 62,055 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
ಧಾರವಾಡ ಜಿಲ್ಲೆಯಲ್ಲಿ 49,599, ಗದಗ 44,213, ಹಾಸನ 50,713, ಹಾವೇರಿ 74,477, ಕಲಬುರಗಿ 54,048, ಕೊಡಗು 15,686, ಕೋಲಾರ 40,348, ಕೊಪ್ಪಳ 52,773, ಮಂಡ್ಯ 63,488, ಮೈಸೂರು 45,883, ರಾಯಚೂರು 33,753, ಶಿವಮೊಗ್ಗ 48,590, ತುಮಕೂರು 61,238, ಉಡುಪಿ 13,841, ಉತ್ತರ ಕನ್ನಡ 42159, ವಿಜಯನಗರ 29,748, ವಿಜಯಪುರ 33,619 ಮತ್ತು ಯಾದಗಿರಿ ಜಿಲ್ಲೆಯಲ್ಲಿ 24,899 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.
ಒಟ್ಟು 1,43,77,978 ಕುಟುಂಬಗಳ ಸಮೀಕ್ಷೆಯ ಗುರಿಯನ್ನು ಇಟ್ಟುಕೊಳ್ಳಾಗಿದೆ. ಈಗ 12,87,087 ಕುಟುಂಬಗಳ ಸಮೀಕ್ಷೆ ನಡೆದಿದೆ. ಶನಿವಾರ ಒಂದೇ ದಿನ 8,18,964 ಕುಟುಂಬ ಸಮೀಕ್ಷೆ ನಡೆದಿದೆ. ಪ್ರತಿನಿತ್ಯ 11,85,637 ಕುಟುಂಬ ಸಮೀಕ್ಷೆಯನ್ನು ನಡೆಸಬೇಕು ಎಂದು ಸರಕಾರ ಗುರಿಯನ್ನು ನಿಗಧಿಪಡಿಸಿದೆ.
ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ: ‘ಸಂಘಟನೆಗಳು ಸೇರಿ ಕೆಲವರು ಸಮೀಕ್ಷೆಯನ್ನು ತಡೆಯಬೇಕೆಂದು ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಸಮೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಸುಮಾರು 12ಕ್ಕೂ ಅಧಿಕ ಲಕ್ಷ ಕುಟುಂಬಗಳಷ್ಟು ಸಮೀಕ್ಷೆ ಪೂರ್ಣಗೊಂಡಿದೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ