ಸಾಂದರ್ಭಿಕ ಚಿತ್ರ PC : Image by magnific

ಬೆಂಗಳೂರು : ಇನ್ನು ಮುಂದೆ ಎಲ್ಲ ಶಿಕ್ಷಕರುಗಳ ಹೆಸರುಗಳ ಮುಂದೆ ಟಿ.ಆರ್(ಟೀಚರ್) ಎಂಬ ಶೀರ್ಷಿಕೆಯ ಪೂರ್ವಪ್ರತ್ಯಯವನ್ನು ಬಳಸಲು ಸರಕಾರವು ಅನುಮತಿ ನೀಡಿ ಆದೇಶ ಹೊರಡಿಸಿದೆ.

ಸಮಾಜದ ನಿರ್ಮಾಣ ಮತ್ತು ಪ್ರಗತಿಯಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರ ಅತ್ಯಮೂಲ್ಯವಾದ ಕೊಡುಗೆಯನ್ನು ಸ್ಮರಿಸುತ್ತಾ, ಶಿಕ್ಷಕರ ದಿನಾಚರಣೆಯ ಅಂಗವಾಗಿ ಗೌರವಪೂರ್ವಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor