×
Ad

ತಾಂತ್ರಿಕ ಸಮಸ್ಯೆ: ಖ್ಯಾತ ಕಾಮೆಡಿಯನ್ ಟ್ರೇವರ್ ನೋಹ್ ಬೆಂಗಳೂರು ಶೋ ರದ್ದು

Update: 2023-09-28 16:13 IST

ಬೆಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಕಾಮೆಡಿಯನ್ ಟ್ರೇವರ್ ನೋಹ್ ರ ಕಾರ್ಯಕ್ರಮ ತಾಂತ್ರಿಕ ಸಮಸ್ಯೆಗಳಿಂದ ರದ್ದುಗೊಂಡಿದ್ದರಿಂದ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ. ಈ ಕುರಿತು ಹಲವಾರು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರಿದ್ದು, ಸೆಪ್ಟೆಂಬರ್ 27ರ ರಾತ್ರಿ 7.30ಕ್ಕೆ ಪ್ರಾರಂಭವಾಗಬೇಕಿದ್ದ ಪ್ರದರ್ಶನವು ಸುಮಾರು ಅರ್ಧ ಗಂಟೆ ತಡವಾಗಿ ಆರಂಭಗೊಂಡಿತು ಎಂದು ದೂರಿದ್ದಾರೆ. ಕಳಪೆ ಧ್ವನಿವರ್ಧಕ ವ್ಯವಸ್ಥೆಯ ಕಾರಣಕ್ಕೆ ನೋಹ್‌ರ ಅಭಿಮಾನಿಗಳಿಗೆ ಏನೂ ಕೇಳಿಸದೆ ಇದ್ದುದರಿಂದ ಪ್ರದರ್ಶನವನ್ನು ತರಾತುರಿಯಲ್ಲಿ ರದ್ದುಗೊಳಿಸಬೇಕಾಯಿತು ಎಂದು ndtv.com ವರದಿ ಮಾಡಿದೆ.

ಈ ಕುರಿತು ಬುಧವಾರ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನೋಹ್, "ನನ್ನ ಅಭಿಮಾನಿಗಳಿಗೆ ಆಗಿರುವ ಅನಾನುಕೂಲ ಹಾಗೂ ನಿರಾಶೆಗೆ ಕ್ಷಮೆ ಕೋರುತ್ತೇನೆ" ಎಂದು ಹೇಳಿದ್ದು, ಮ್ಯಾನ್ಫೊ ಕನ್ವೆನ್ಶನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 27 ಮತ್ತು 28ರಂದು ಆಯೋಜಿಸಲಾಗಿದ್ದ ಎರಡೂ ಪ್ರದರ್ಶನಗಳೂ ರದ್ದುಗೊಂಡಿವೆ ಎಂದು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News