×
Ad

ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಂಡು ಪೊಲೀಸರಿಗೇ ವಂಚಿಸುತ್ತಿದ್ದ ಆರೋಪಿ ಸೆರೆ

Update: 2023-11-08 19:00 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ನ.8: ತಾನು ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಂಡು ಪೊಲೀಸರಿಗೆ ವಂಚಿಸುತ್ತಿದ್ದ ಆರೋಪದಲ್ಲಿ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ನಾಲ್ಕು ವರ್ಷಗಳಿಂದ ಪೊಲೀಸರಿಗೆ ವಂಚಿಸುತ್ತಿದ್ದ ವಸೀಂ(32) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಆರೋಪಿ ವಸೀಂ ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವ ನಾಟಕ ಮಾಡಿ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ಅಕ್ರಮ ಚಟುವಟಿಕೆಗಳು, ದಂಧೆಗಳು ಎಲ್ಲೆಲ್ಲಿ ನಡೆಯುತ್ತಿವೆ, ಅಲ್ಲಿ ಏನೇನು ನಡೆಯಲಿದೆ ಎಂದು ಮಾಹಿತಿ ಕೊಡುವೆ ಎಂದು ಪೆÇಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ. ಪೊಲೀಸರು ಈಗಲೇ ಕಾರ್ಯಾಚರಣೆ ನಡೆಸುತ್ತೇವೆ ಎಂದರೆ ತಡೆಯುತ್ತಿದ್ದ ಆರೋಪಿಯು ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸುವೆ ಎನ್ನುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಆಟೋ ತೊಂದರೆ ಕೊಡುತ್ತಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ, ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ 2ರಿಂದ 3 ಸಾವಿರ ರೂ. ಫೋನ್ ಪೇ ಮಾಡಿ ಎನ್ನುತ್ತಿದ್ದ, ಇದನ್ನು ನಂಬಿ ಪೊಲೀಸರು ಹಣ ಹಾಕಿದರೆ, ಹಣ ಬಂದ ಕೆಲವೇ ಕ್ಷಣಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.

ಈ ಸಂಬಂಧ ಆರೋಪಿ ವಸೀಂನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News