×
Ad

ರಾಜ್ಯದಲ್ಲಿ ವರ್ಗಾವಣೆ ದಂಧೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ: ಬಿಜೆಪಿ ಕಿಡಿ

Update: 2023-08-04 12:39 IST

ಬೆಂಗಳೂರು: ʼʼ ಮಳೆ ನಿಂತರೂ ಮಳೆಯ ಹನಿ ನಿಲ್ಲಲ್ಲ' ಎನ್ನುವ ಹಾಗೆ #ATMSarkara ಆರಂಭಿಸಿರುವ ವರ್ಗಾವಣೆ ದಂಧೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲʼʼ ಎಂದು ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ವಿಪಕ್ಷ ಬಿಜೆಪಿ ಕಿಡಿಕಾರಿದೆ. 

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ @BJP4Karnataka, ʼʼಸಚಿವರು ಮತ್ತು ಶಾಸಕರುಗಳು ವರ್ಗಾವಣೆಯೊಂದೇ ಸರ್ಕಾರದ ಕೆಲಸ ಎಂದು ಭಾವಿಸಿದ್ದಾರೆʼʼ ಎಂದು ತರಾಟೆಗೆ ತೆಗೆದುಕೊಂಡಿದೆ. 

ʼʼಸಿಎಂ, ಸಚಿವರು & ಶಾಸಕರುಗಳು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳಲು ತೋರುತ್ತಿರುವ ಮುತುವರ್ಜಿಯನ್ನು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ತೋರದಿರುವುದು ಈ ರಾಜ್ಯಕ್ಕೆ ಹಾಗೂ ಮತದಾರರಿಗೆ ಮಾಡುತ್ತಿರುವ ದ್ರೋಹʼʼ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

ʼʼರಾಜ್ಯ ಕಾಂಗ್ರೆಸ ನಲ್ಲಿ ಮೂಲ V/s ವಲಸೆ ಫೈಟ್..!ʼʼ

ʼʼಸಿಎಂ, ಡಿಸಿಎಂ ನಡುವಿನ ಕಿತ್ತಾಟದಿಂದ ಜೋರಾಯ್ತು ಬಣ ಬಡಿದಾಟ..!,  ಡಿಸಿಎಂ ಹೋಗುವ ಕಾರ್ಯಕ್ರಮಕ್ಕಿಲ್ಲ ಸಿಎಂಗೆ ಎಂಟ್ರಿ..!, ಸಿಎಂ ಹೋಗುವ ಕಾರ್ಯಕ್ರಮಕ್ಕೆ ಹೋಗಲ್ಲ ಡಿಸಿಎಂ..!,  ಸಿದ್ದರಾಮಯ್ಯ ಬಣ ಹೋಗುವ ಮುನ್ನವೇ ಡಿಕೆ ಶಿವಕುಮಾರ್ ಬಣ ದಿಲ್ಲಿಗೆ ಶಿಫ್ಟ್..!, ನಿಗಮ ಮಂಡಳಿ ಸ್ಥಾನಗಳಿಗಾಗಿ ನಡೆಯುತ್ತಿದೆ ಸಿಎಂ- ಡಿಸಿಎಂ ಫೈಟ್..!, ಡಿಸಿಎಂಗೆ ದಿಲ್ಲಿಯಲ್ಲಿ ಹಿನ್ನಡೆಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ಬಣ ಉಲ್ಬಣ..!, ಸಿಂಗಾಪೂರ್ ಎಂದ ಡಿಕೆ ಶಿವಕುಮಾರ್ ಅವರಿಂದ ಕರ್ನಾಟಕದಲ್ಲೇ ಚೆಸ್ ಆಟ..!ʼʼ ಎಂದು ಬಿಜೆಪಿ ಟೀಕಿಸಿದೆ. 

ʼಡಿಕೆ ಶಿವಕುಮಾರ್ ಅವರ 'ಕುರ್ಚಿಗಾಗಿ ಹೋರಾಟ' ಅಭಿಯಾನ ಸಿಂಗಾಪುರ್ ಬದಲು ಕರ್ನಾಟಕದಲ್ಲಿ ಇದೀಗ ಶುರುವಾಗಿದೆʼ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News