×
Ad

ತೀರ್ಥಹಳ್ಳಿ: ಜೈಲರ್ ಸಿನೆಮಾ ಪ್ರದರ್ಶನದ ವೇಳೆ ಕುಸಿದ ಚಿತ್ರಮಂದಿರದ ಮುಂಭಾಗದ ಗೋಡೆ

Update: 2023-08-23 16:07 IST

ಶಿವಮೊಗ್ಗ, ಆ.23: ರಜಿನಿಕಾಂತ್ ಅವರ ಅಭಿನಯದ ಜೈಲರ್ ಸಿನೆಮಾ ಪ್ರದರ್ಶನ ಸಂದರ್ಭದಲ್ಲಿ ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದ ಮುಂಭಾಗದ ಗೋಡೆ ಕುಸಿದು ಬಿದ್ದಿರುವ ಘಟನೆ ಮಂಗಳವಾರ ರಾತ್ರಿ ವರದಿಯಾಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಸಮೀಪದ ಮಾರ್ಕೆಟ್ ರೋಡ್‌ನಲ್ಲಿರುವ ವಿನಾಯಕ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ಸೆಕೆಂಡ್ ಶೋ ಆರಂಭವಾಗಿತ್ತು. ಕೆಲಹೊತ್ತಿನಲ್ಲಿ ಟಾಕೀಸ್‌ನ ಮುಂಭಾಗದ ಗೋಡೆ ಕುಸಿದಿದೆ. ಪರಿಣಾಮ ಪಾರ್ಕ್ ಮಾಡಿದ್ದ 10 ಕ್ಕೂ ಹೆಚ್ಚು ಬೈಕಗಳು ಜಖಂಗೊಂಡಿದೆ. ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.

ವಿಷಯ ತಿಳಿಯುತ್ತಲೆ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News