34 ತಹಶೀಲ್ದಾರ್‌ಗಳ ವರ್ಗಾವಣೆ: ರಾಜ್ಯ ಸರಕಾರ ಆದೇಶ
ಬೆಂಗಳೂರು : ಮಂಗಳೂರು ತಾಲೂಕು ಗ್ರೇಡ್1 ತಹಶೀಲ್ದಾರ್ ಪ್ರಶಾಂತ್.ವಿ ಪಾಟೀಲ ಅವರನ್ನು ಉಳ್ಳಾಲ ತಾಲೂಕಿನಲ್ಲಿ ಖಾಲಿ ಇದ್ದ ಗ್ರೇಡ್ 1 ತಹಶೀಲ್ದಾರ್ ಹುದ್ದೆಗೆ ಸೇರಿ ರಾಜ್ಯದ 34 ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶಿಸಿದೆ.
ಇಳಕಲ್ ತಾಲೂಕು ಗ್ರೇಡ್ 1ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಖಾಲಿ ಇದ್ದ ಗ್ರೇಡ್ 1ತಹಶೀಲ್ದಾರ್ ಹುದ್ದೆಗೆ, ಭಟ್ಕಳ ತಾಲೂಕು ಗ್ರೇಡ್2 ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರನ್ನು ಭಟ್ಕಳ ತಾಲೂಕಿನ ಗ್ರೇಡ್1 ತಹಶೀಲ್ದಾರ್‌ರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗ್ರೇಡ್2 ತಹಶೀಲ್ದಾರ್ ರಾಮಚಂದ್ರಪ್ಪ ಅವರನ್ನು ಬೈಂದೂರು ತಾಲೂಕಿನಲ್ಲಿ ಖಾಲಿ ಇದ್ದ ಗ್ರೇಡ್ 2 ತಹಶೀಲ್ದಾರ್ ಹುದ್ದೆಗೆ, ಸಕ್ಷಮ ಪ್ರಾಧಿಕಾರಗಳ ಕಾರ್ಯಾಲಯದಲ್ಲಿ ವಿಶೇಷಾಧಿಕಾರಿಯಾಗಿದ್ದ ಕಾವ್ಯಶ್ರೀ.ಎಚ್ ಅವರನ್ನು ಬಾದಾಮಿ ತಾಲೂಕಿಗೆ ಗ್ರೇಡ್1 ತಹಶೀಲ್ದಾರ್ ಹುದ್ದೆಗೆ, ಗುಳೇದಗುಡ್ಡದ ವಿಶೇಷ ತಹಶೀಲ್ದಾರ್ ಮಹೇಶ್ ಭಗವಂತ ಗಸ್ತೆ ಅವರನ್ನು ಹುಬ್ಬಳ್ಳಿ ನಗರದಲ್ಲಿ ಖಾಲಿ ಇದ್ದ ಗ್ರೇಡ್ 1 ತಹಶೀಲ್ದಾರ್ ಹುದ್ದಗೆ ವರ್ಗಾವಣೆ ಮಾಡಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಶಿಷ್ಠಾಚಾರ ತಹಶೀಲ್ದಾರ್ ಎಂ.ರೇಣುಕಾ ಅವರನ್ನು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿಗೆ ಗ್ರೇಡ್1 ತಹಶೀಲ್ದಾರ್ ಹುದ್ದೆಗೆ ಹಾಗೂ ಹರಪ್ಪನಹಳ್ಳಿಯ ಸಹಾಯಕ ಆಯುಕ್ತರ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಅವರನ್ನು ಶಿರಹಟ್ಟಿ ತಾಲೂಕಿಗೆ ಗ್ರೇಡ್ 1 ತಹಶೀಲ್ದಾರ್ ಹುದ್ದೆಗೆ ವರ್ಗಾಯಿಸಲಾಗಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಮುಂದಿನ ಆದೇಶದ ವರೆಗೆ 34 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.