×
Ad

ಶಿವಮೊಗ್ಗ: ಎರಡು ಬೈಕ್‌- ಲಾರಿ ಢಿಕ್ಕಿ; ಮೂವರು ಮೃತ್ಯು, ಓರ್ವ ಗಂಭೀರ

Update: 2023-10-01 12:15 IST

ಶಿವಮೊಗ್ಗ: ಲಾರಿ ಹಾಗೂ ಎರಡು ಬೈಕ್‌ಗಳು ಢಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕಲ್ಲಿಹಾಳ್-ಅರಹತೊಳಲು ಗ್ರಾಮದ ಬಳಿ ನಡೆದಿದೆ.

ಮೃತ ಯುವಕರನ್ನು ವಿಕಾಸ್ (18), ಯಶ್ವಂತ‌(17) ಶಶಾಂಕ (17) ಎಂದು ಗುರುತಿಸಲಾಗಿದೆ. ಮೃತರು ಹಳೆ ಜಂಬರಗಟ್ಟ ನಿವಾಸಿಗಳು ಎಂದು ತಿಳಿದುಬಂದಿದೆ. ಮತ್ತೊಬ್ಬ ಬೈಕ್‌ ಸವಾರಭದ್ರಾವತಿ ತಾಲೂಕು ಅರದೊಟ್ಟು ಗ್ರಾಮದ ಬಸವರಾಜ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಸವರಾಜ್ ಕೈಮರ ಕಡೆಯಿಂದ ಕಲ್ಲಿಹಾಳ್‌ ಕಡೆಗೆ ತೆರಳುತ್ತಿದ್ದ. ಇದೇ ವೇಳೆ ಲಾರಿ ಹಾಗೂ ಬೈಕ್‌ ಎದುರಿನಿಂದ ಬರುತ್ತಿದ್ದವು. ಲಾರಿಯನ್ನು ಓವರ್‌ಟೇಕ್‌ ಮಾಡಿದ ಮೂವರಿದ್ದ ಬೈಕ್‌ ಮತ್ತೊಂದು ಬೈಕ್‌ಗೆ ಢಿಕ್ಕಿಯಾಗಿದೆ. ನಿಯಂತ್ರಣ ತಪ್ಪಿದ ಬೈಕ್ ಸವಾರರು ರಸ್ತೆಗೆ ಬಿದ್ದಿದ್ದಾರೆ. ಮತ್ತೊಂದೆಡೆ ವೇಗವಾಗಿ ಬರುತ್ತಿದ್ದ ಲಾರಿ ರಸ್ತೆ ಮೇಲೆ ಬಿದ್ದಿದ್ದ ಬೈಕ್​ ಸವಾರರ ಮೇಲೆ ಹರಿದಿದೆ. ಪರಿಣಾಮ ಒಂದೇ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ಗಾಯಾಳು ಯುವಕನನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News