×
Ad

"ನೀವು ಯಾವತ್ತೂ ನಮ್ಮ ಚಾಂಪಿಯನ್":‌ ವಿನೇಶ್‌ ಫೋಗಟ್‌ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್‌

Update: 2024-08-07 16:12 IST

ವಿನೇಶ್‌ ಫೋಗಟ್‌/ಸಿಎಂ ಸಿದ್ದರಾಮಯ್ಯ(PTI)

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ ಮಹಿಳೆಯರ ಕುಸ್ತಿ ಫೈನಲ್‌ ಪಂದ್ಯಾಟದಿಂದ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್‌ ಫೋಗಟ್‌ ಅವರಿಗೆ ಬೆಂಬಲಿಸಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

“ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಫೋಗಟ್‌ ಅವರಿಗೆ ನಡೆದ ದುರದೃಷ್ಟಕರ ಅನುಭವದಿಂದ ನನಗೆ ನೋವಾಗಿದೆ. ನಿಮ್ಮ (ವಿನೇಶ್‌ ಫೋಗಟ್‌) ಸಾಮರ್ಥ್ಯ, ಹೋರಾಟ ಮತ್ತು ಸಮರ್ಪಣಾ ಭಾವವು ದೇಶಕ್ಕೆ ಸದಾ ಸ್ಪೂರ್ತಿಯಾಗಿರಲಿದೆ.

ಈ ಘಟನೆಯು ನಿಮ್ಮ ಸಾಧನೆಗಳನ್ನು ಮತ್ತು ನೀವು ಭಾರತಕ್ಕೆ ತಂದ ಹೆಮ್ಮೆಯನ್ನು ಕಡಿಮೆ ಮಾಡುವುದಿಲ್ಲ. ಧೈರ್ಯವಾಗಿರಿ ವಿನೇಶ್. ನೀವು ಯಾವಾಗಲೂ ನಮ್ಮ ಚಾಂಪಿಯನ್ ಆಗಿರುತ್ತೀರಿ!” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News