×
Ad

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದು ಬಾಲಕಿ ನೀರುಪಾಲು

Update: 2023-09-29 19:41 IST

ಮೃತ ಬಾಲಕಿ

ಅರಕಲಗೂಡು: ಹಾರಂಗಿ ಬಲದಂಡೆ ನಾಲೆಯಲ್ಲಿ ಕಾಲುಜಾರಿ ಬಿದ್ದು ಬಾಲಕಿಯೊಬ್ಬಳು ನೀರುಪಾಲಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.

ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿ ಮಧುರನಹಳ್ಳಿ ಗ್ರಾಮದ ವಾಸಿ ರೇವಣ್ಣ ಹಾಗೂ ಭಾಗ್ಯ ದಂಪತಿಯ ಮಗಳು ಸುಪ್ರೀತಾ (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.

ಕರ್ನಾಟಕ ಬಂದ್ ಹಿನ್ನಲೆ ಶಾಲೆಗೆ ರಜೆ ಇದ್ದದ್ದರಿಂದ ಮಕ್ಕಳೊಂದಿಗೆ ಹಾರಂಗಿ ಬಲದಂಡೆ ನಾಲೆಗೆ ಆಟವಾಡುವಾಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. 

ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿದಿದೆ.  ತಾಲೂಕು ಕಚೇರಿಯ ಶಿರೆಸ್ತೇದಾರರಾದ ಸಿ.ಸ್ವಾಮಿ .ಉಪತಹಶೀಲ್ದಾರರಾದ ರವಿ ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್ ಕಾಂಬ್ಳೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News