×
Ad

ಶಾಸಕರ ತರಬೇತಿ ಶಿಬಿರ | ಸಿದ್ದರಾಮಯ್ಯ ಪ್ರಶ್ನೆಗೆ ತಬ್ಬಿಬ್ಬಾದ ಸಚಿವ ಝಮೀರ್..!

Update: 2023-06-26 22:29 IST

ಬೆಂಗಳೂರು, ಜೂ. 26: ‘ಏ... ಝಮೀರ್ ನೀನು ಯಾವಾಗಾದರೂ ಗ್ರಂಥಾಲಯಕ್ಕೆ ಹೋಗಿದ್ದೀಯಾ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಿದ್ದಂತೆಯೇ, ಸಚಿವ ಝಮೀರ್ ಅಹ್ಮದ್ ಖಾನ್ ಒಂದು ಕ್ಷಣ ತಬ್ಬಿಬ್ಬಾದ ಪ್ರಸಂಗ ಜರುಗಿತು.

ಸೋಮವಾರ ರಾಜ್ಯದ 16ನೆ ವಿಧಾನ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ನೂತನ ಸದಸ್ಯರಿಗೆ ಇಲ್ಲಿನ ನೆಲಮಂಗಲದ ಎಸ್‍ಡಿಎಂ ಇನ್‍ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕ್ಷೇಮವನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಲದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ವೇಳೆ ಶಾಸಕರು ಕಡ್ಡಾಯವಾಗಿ ಗ್ರಂಥಾಲಯಕ್ಕೆ ತೆರಳಿ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ ಸಿದ್ದರಾಮಯ್ಯ ಅವರು, ವೇದಿಕೆಯಲ್ಲಿದ್ದ ಝಮೀರ್ ಅವರಿಗೆ ನೀನು ಲೈಬ್ರರಿಗೆ ಯಾವತ್ತಾದ್ರೂ ಹೋಗಿದ್ಯಾ? ಪ್ರಶ್ನೆ ಕೇಳಿದರು. ಈ ವೇಲೆ ಹಠಾತ್ತನೇ ಬಂದ ಈ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಝಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಮುಖ ನೋಡಿ ನಕ್ಕು ತಲೆ ತಗ್ಗಿಸಿದರು.

'ಶಾಸಕರಿಗಾಗಿಯೇ, ಸಾಕಷ್ಟು ಖರ್ಚು ಮಾಡಿ ಗ್ರಂಥಾಲಯ ಕಟ್ಟಿಸಿದ್ದೇವೆ. ಅಲ್ಲಿಗೆ ಯಾರು ಹೋಗುವುದೇ ಇಲ್ಲ, ಪುಸ್ತಕಗಳನ್ನು ಓದುವುದೇ ಇಲ್ಲ' ಎಂದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News