ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯತಿ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಸರಕಾರ, ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಿ ಕರಡು ಗೆಜೆಟ್ ಅಧಿಸೂಚನೆಯನ್ನು ಸಿದ್ಧಪಡಿಸಿದೆ.

ಅದರಂತೆ, 31 ಜಿಲ್ಲಾ ಪಂಚಾಯತಿಗಳ ಒಟ್ಟು 1,129 ಸ್ಥಾನಗಳಲ್ಲಿ ಅನುಸೂಚಿತ ಜಾತಿ-225, ಅನುಸೂಚಿತ ಪಂಗಡ-102, ಹಿಂದುಳಿದ ವರ್ಗ ‘ಅ’-183, ಹಿಂದುಳಿದ ವರ್ಗ ‘ಬ’-43 ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ನಿಗದಿಪಡಿಸಿದೆ. ಈ ಪೈಕಿ ಮಹಿಳೆಯರಿಗೆ 571 ಸ್ಥಾನಗಳನ್ನು ಮೀಸಲಿಡಲಾಗಿದೆ.

ಅದೇ ರೀತಿ, ತಾಲೂಕು ಪಂಚಾಯತಿಯ 3,656 ಸ್ಥಾನಗಳಲ್ಲಿ ಅನುಸೂಚಿತ ಜಾತಿ-733, ಅನುಸೂಚಿತ ಪಂಗಡ-394, ಹಿಂದುಳಿದ ವರ್ಗ ‘ಅ’-508, ಹಿಂದುಳಿದ ವರ್ಗ ‘ಬ’-111, ಸಾಮಾನ್ಯ ವರ್ಗಕ್ಕೆ 1910 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಮಹಿಳೆಯರಿಗೆ 1905 ಸ್ಥಾನಗಳನ್ನು ಮೀಸಲಿಡಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರಕಾರ ಈ ಮಹತ್ವದ ಆದೇಶ ನೀಡಿದ್ದು, ಈ ಹಿಂದೆ ಹೊರಡಿಸಲಾಗಿದ್ದ ಎಲ್ಲ ಅಧಿಸೂಚನೆಗಳನ್ನು ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಜಿ.ಪಂ. ಮೀಸಲಾತಿ ಮೀಸಲಾತಿ ವಿವರ: ಅನುಸೂಚಿತ ಜಾತಿ(ಎಸ್‍ಸಿ): 225 ಸ್ಥಾನಗಳು (ಮಹಿಳೆಯರಿಗೆ 121 ಸ್ಥಾನಗಳು), ಅನುಸೂಚಿತ ಪಂಗಡ (ಎಸ್‍ಟಿ): 102 ಸ್ಥಾನಗಳು (ಮಹಿಳೆಯರಿಗೆ 59 ಸ್ಥಾನಗಳು), ಹಿಂದುಳಿದ ವರ್ಗ ‘ಅ': 183 ಸ್ಥಾನಗಳು (ಮಹಿಳೆಯರಿಗೆ 98 ಸ್ಥಾನಗಳು), ಹಿಂದುಳಿದ ವರ್ಗ ‘ಬ': 43 ಸ್ಥಾನಗಳು (ಮಹಿಳೆಯರಿಗೆ 25 ಸ್ಥಾನಗಳು) ಹಾಗೂ ಸಾಮಾನ್ಯ ವರ್ಗ: 576 ಸ್ಥಾನಗಳು (ಮಹಿಳೆಯರಿಗೆ 268 ಸ್ಥಾನಗಳು) ಮೀಸಲಿಡಲಾಗಿದೆ.

ತಾಲೂಕು ಪಂಚಾಯಿತಿ ಮೀಸಲಾತಿ: 31 ಜಿಲ್ಲೆಗಳ ಎಲ್ಲ ತಾಲೂಕು ಪಂಚಾಯಿತಿಗಳಿಂದ ಒಟ್ಟು 3,656 ಸ್ಥಾನಗಳಲ್ಲಿ, ಅನುಸೂಚಿತ ಜಾತಿ-733, ಅನುಸೂಚಿತ ಪಂಗಡ-394, ಹಿಂದುಳಿದ ವರ್ಗ ‘ಅ’-508, ಹಿಂದುಳಿದ ವರ್ಗ ‘ಬ’-111, ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಮಹಿಳೆಯರಿಗೆ 1,905 ಸ್ಥಾನಗಳನ್ನು ಮೀಸಲಿಡಲಾಗಿದೆ.

ತಾ.ಪಂ. ಮಹಿಳಾ ಮೀಸಲಾತಿ ವಿವರ: ಅನುಸೂಚಿತ ಜಾತಿ-733 ಸ್ಥಾನಗಳು(ಮಹಿಳೆಯರಿಗೆ 429 ಸ್ಥಾನಗಳು), ಅನುಸೂಚಿತ ಪಂಗಡ-394 ಸ್ಥಾನಗಳು(ಮಹಿಳೆಯರಿಗೆ 287 ಸ್ಥಾನಗಳು), ಹಿಂದುಳಿದ ವರ್ಗ ‘ಅ’: 508 ಸ್ಥಾನಗಳು(ಮಹಿಳೆಯರಿಗೆ 306 ಸ್ಥಾನಗಳು), ಹಿಂದುಳಿದ ವರ್ಗ ‘ಬ’: 111 ಸ್ಥಾನಗಳು(ಮಹಿಳೆಯರಿಗೆ 64 ಸ್ಥಾನಗಳು) ಹಾಗೂ ಸಾಮಾರ್ನ ವರ್ಗ: 1,910 ಸ್ಥಾನಗಳು(ಮಹಿಳೆಯರಿಗೆ 819 ಸ್ಥಾನಗಳು) ಮೀಸಲಿಡಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor