×
Ad

ಉಚಿತ ChatGPT ಅವಧಿ ಮುಗಿದಿದೆ; ಜಾಹೀರಾತು ಜೊತೆಗೆ ಬಳಸಿ!

Update: 2026-02-10 15:55 IST

Photo Credit : ChatGPT-Logo.svg

ಜಾಹೀರಾತುಗಳನ್ನು ಗ್ರಾಹಕರು ಸಂವಾದದಲ್ಲಿ ಬಳಸುವ ವಿಷಯಗಳು ಮತ್ತು ಹಿಂದಿನ ಚಾಟ್ಗಳನ್ನು ಅನುಸರಿಸಿ ನೀಡಲಾಗುತ್ತದೆ.

OpenAI ಫೆಬ್ರವರಿ 9ರಂದು ಸೋಮವಾರ ಬ್ಲಾಗ್ಪೋಸ್ಟ್ ಒಂದನ್ನು ಹಂಚಿಕೊಂಡು ChatGPT ಒಳಗೆ ಜಾಹೀರಾತು ನೀಡುವುದಾಗಿ ಘೋಷಿಸಿದೆ. ಉಚಿತವಾಗಿ ಜಾಟ್ಜಿಪಿಟಿ ಬಳಸುವವರು ಮತ್ತು ಚಾಟ್ಜಿಪಿಟಿ ಗೋ ಬಳಸುವವರಿಗೆ ಈ ಜಾಹೀರಾತುಗಳು ಕಾಣಿಸುತ್ತವೆ. ಆದರೆ ಚಾಟ್ಜಿಪಿಟಿ ಪ್ಲಸ್ ಮತ್ತು ಪ್ರೊನಲ್ಲಿ ಹಣ ಪಾವತಿಸಿ ಬಳಸುವ ಚಂದಾದಾರರಿಗೆ ಜಾಹೀರಾತುಗಳು ಕಾಣಿಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಚಾಟ್ಜಿಪಿಟಿ ಫಲಿತಾಂಶಗಳ ಮೇಲೆ ಪ್ರಭಾವ ಬೀರದು

ಜಾಹೀರಾತುಗಳಿಂದ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಕುರಿತ ಕಾಳಜಿ ಬ್ಗಗೆ ಪತ್ರಿಕಾ ಹೇಳಿಕೆಯಲ್ಲಿ OpenAI ಸ್ಪಷ್ಟಪಡಿಸಿದೆ. “ಚಾಟ್ಜಿಪಿಟಿ ನಿಮಗೆ ಕೊಡುವ ಉತ್ತರದ ಮೇಲೆ ಜಾಹೀರಾತುಗಳು ಪ್ರಭಾವ ಬೀರುವುದಿಲ್ಲ ಮತ್ತು ಚಾಟ್ ಜಿಪಿಟಿ ಜೊತೆಗೆ ನಿಮ್ಮ ಸಂಭಾಷಣೆಯನ್ನು ಜಾಹೀರಾತುದಾರರಿಂದ ಖಾಸಗಿಯಾಗಿ ಇಡುತ್ತೇವೆ. ಈ ಅನುಭವ ಸರಿಯಾಗಿರುತ್ತದೆ ಎನ್ನುವ ಬಗ್ಗೆ ನಾವೀಗ ಕಲಿಯುವುದು, ಕೇಳುವುದು ಮತ್ತು ಖಚಿತಪಡಿಸುವ ಕಲಿಕಾ ಹಂತದಲ್ಲಿದ್ದೇವೆ” ಎಂದು OpenAI ಹೇಳಿದೆ.

ಜಾಹೀರಾತುಗಳನ್ನು ಗ್ರಾಹಕರು ಸಂವಾದದಲ್ಲಿ ಬಳಸುವ ವಿಷಯಗಳು ಮತ್ತು ಹಿಂದಿನ ಚಾಟ್ಗಳನ್ನು ಅನುಸರಿಸಿ ನೀಡಲಾಗುತ್ತದೆ. ಆದರೆ ಜಾಹೀರಾತುದಾರರಿಗೆ ವ್ಯಕ್ತಿಗತ ಚಾಟ್ ಡೇಟಾಗೆ ಪ್ರವೇಶ ನೀಡುವುದಿಲ್ಲ ಎಂದು ಸಂಸ್ಥೆ ಹೇಳಿದೆ.

ಜಾಹೀರಾತು ಕುರಿತಂತೆ ಸ್ಪಷ್ಟತೆ

ತಾಂತ್ರಿಕ ವಿಚಾರಕ್ಕೆ ಬಂದಲ್ಲಿ ಓಪನ್ಎಐನ ಜಾಹೀರಾತುಗಳನ್ನು ಸ್ಪಷ್ಟವಾಗಿ ‘ಪ್ರಾಯೋಜಿಸಲಾಗಿದೆ’ ಎಂದು ಲೇಬಲ್ ಮಾಡಿರಲಾಗುತ್ತದೆ. ಜಾಹೀರಾತು ಉತ್ತರದಿಂದ ಪ್ರತ್ಯೇಕವಾಗಿ ಕಾಣಿಸುತ್ತದೆ. ಸೂಕ್ಷ್ಮ ವಿಷಯಗಳಾದ ಆರೋಗ್ಯ, ಮಾನಸಿಕ ಆರೋಗ್ಯ ಅಥವಾ ರಾಜಕೀಯಗಳ ಜೊತೆಗೆ ಜಾಹೀರಾತುಗಳು ಇರದಂತೆ ಕಂಪನಿ ಸುರಕ್ಷಾ ಕವಚಗಳನ್ನು ಅನುಷ್ಠಾನಗೊಳಿಸಿರುವುದಾಗಿ ತಿಳಿಸಿದೆ. ಚಾಟ್ಬೋಟ್ನಿಂದ ಜಾಹೀರಾತನ್ನು ಡಿಲೀಟ್ ಮಾಡುವ ಅವಕಾಶವೂ ದೊರೆಯಲಿದೆ.

ಲಕ್ಷಾಂತರ ಜನರಿಗೆ AI ಉಚಿತವಾಗಿ ಬಳಸುವ ಅವಕಾಶ ನೀಡುವ ಉದ್ದೇಶದಿಂದ ಜಾಹೀರಾತು ಕಲ್ಪನೆಯನ್ನು ತರಲಾಗಿದೆ. ಈ ಬದಲಾವಣೆಗೆ ಗ್ರಾಹಕರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಪ್ರತಿಕ್ರಿಯೆಗಳಿಗೆ ಮುಕ್ತವಾಗಿರುವುದಾಗಿ ಓಪನ್ಎಐ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News