×
Ad

ಅಮೆರಿಕಕ್ಕೆ ಎರಡು ಪಾಂಡಾ ಉಡುಗೊರೆ ನೀಡಿದ ಚೀನಾ

Update: 2024-06-27 21:49 IST

ಸಾಂದರ್ಭಿಕ ಚಿತ್ರ | PC : PTI 

 

ಬೀಜಿಂಗ್: ಸುಮಾರು ಎರಡು ದಶಕಗಳಲ್ಲೇ ಪ್ರಥಮ ಬಾರಿಗೆ ಚೀನಾ ಎರಡು ದೈತ್ಯ ಪಾಂಡಾಗಳನ್ನು ಅಮೆರಿಕಾಕ್ಕೆ ಉಡುಗೊರೆಯಾಗಿ ರವಾನಿಸಿದೆ.

ಸಿಚುವಾನ್ ಪ್ರಾಂತದ `ದೈತ್ಯ ಪಾಂಡಾ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರ'ದಿಂದ ಕಳುಹಿಸಲಾದ ಯುನ್ ಚುವಾನ್ ಮತ್ತು ಕ್ಸಿನ್ ಬವೊ ಎಂಬ ಎರಡು ದೈತ್ಯ ಪಾಂಡಾಗಳು ಅಮೆರಿಕದ ಸ್ಯಾನ್ಡಿಯಾಗೊ ಮೃಗಾಲಯಕ್ಕೆ ಆಗಮಿಸಲಿವೆ. ಅಂತರರಾಷ್ಟ್ರೀಯ ದೈತ್ಯ ಪಾಂಡಾ ಸಂರಕ್ಷಣೆ ಸಹಕಾರ ಒಪ್ಪಂದದಡಿ ಈ ಪ್ರಕ್ರಿಯೆ ನಡೆದಿದೆ ಎಂದು ವರದಿಯಾಗಿದೆ. `ಇದು ಐತಿಹಾಸಿಕ ಸಂರಕ್ಷಣೆ ಪಾಲುದಾರಿಕೆಯಾಗಿದ್ದು ಈ ಅದ್ಭುತ ಜೀವಿಗಳು ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಿಸಲು ಸಹಾಯ ಮಾಡುತ್ತದೆ' ಎಂದು ಸ್ಯಾನ್ಡಿಯಾಗೊದ ಮೇಯರ್ ಟಾಡ್ ಗ್ಲೋರಿಯಾ `ಎಕ್ಸ್' (ಟ್ವೀಟ್) ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News