×
Ad

ಚಿಕ್ಕಮಗಳೂರು | ಅಂಗಡಿಯಿಂದ 40 ಕೆಜಿ ಟೊಮೆಟೋ ಕಳವು: ದೂರು ದಾಖಲು

Update: 2023-07-12 09:45 IST

ಚಿಕ್ಕಮಗಳೂರು, ಜು.12: ತರಕಾರಿ ಅಂಗಡಿಯೊಂದರಿಂದ 3,000 ಸಾವಿರ ರೂ. ಮೌಲ್ಯದ 40 ಕೆ.ಜಿ. ಟೊಮೆಟೋ ಕಳವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ.

ಆಲ್ದೂರು ಪಟ್ಟಣದಲ್ಲಿರುವ ಪೊಲೀಸ್ ಠಾಣೆಯ ಕಾಂಪೌಂಡ್ಗೆ ಹೊಂದಿಕೊಂಡಂತಿರುವ ನದೀಂ ಎಂಬುವರ ತರಕಾರಿ ಅಂಗಡಿಯಿಂದ ಈ ಕಳವು ನಡೆದಿದೆ. ಎರಡು ಟ್ರೇ ಟೊಮೆಟೋ ಕಳ್ಳತನವಾಗಿದೆ ಎಂದವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನು ಅಂಗಡಿಯಲ್ಲಿ ಇಟ್ಟು ಟರ್ಪಾಲು ಮುಚ್ಚಿ ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮೆಟೋ ಕಳವಾಗಿತ್ತು ಎಂದು ನದೀಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News