×
Ad

ಇರಾನ್ ನಿಂದ ಕ್ಷಿಪಣಿ–ಡ್ರೋನ್ ದಾಳಿ ಬೆದರಿಕೆ: ಯುಎಇ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯ

ನಿವಾಸಿಗಳಿಗೆ ಸಾಮಾನ್ಯ ಚಟುವಟಿಕೆ ಪುನರಾರಂಭಿಸಬಹುದು ಎಂದು ಅಲರ್ಟ್ ಸಂದೇಶ

Update: 2026-03-08 00:30 IST

ಅಬುಧಾಬಿ : ಇರಾನ್‌ ನಿಂದ ಬರುತ್ತಿರುವ ಕ್ಷಿಪಣಿ ಹಾಗೂ ಡ್ರೋನ್ ಬೆದರಿಕೆಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಾಯು ರಕ್ಷಣಾ ವ್ಯವಸ್ಥೆಗಳು ಪ್ರತಿಕ್ರಿಯಿಸುತ್ತಿವೆ ಎಂದು ದೇಶದ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.

ದೇಶದ ವಿವಿಧ ಭಾಗಗಳಲ್ಲಿ ಕೇಳಿಬರುತ್ತಿರುವ ಭಾರೀ ಶಬ್ದಗಳು, ಕ್ಷಿಪಣಿಗಳು ಮತ್ತು ಡ್ರೋನ್‌ ಗಳನ್ನು ತಡೆಗಟ್ಟಲು ಕಾರ್ಯನಿರ್ವಹಿಸುತ್ತಿರುವ ವಾಯು ರಕ್ಷಣಾ ವ್ಯವಸ್ಥೆಗಳದ್ದೇ ಆಗಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಯುಎಇ ಆಂತರಿಕ ಸಚಿವಾಲಯ (MOI) ದೇಶದ ನಿವಾಸಿಗಳ ಮೊಬೈಲ್ ಫೋನ್‌ಗಳಿಗೆ ಅಲರ್ಟ್ ಸಂದೇಶ ಕಳುಹಿಸಿದೆ.

‘ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಪ್ರಸ್ತುತ ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನಾಗರಿಕರು ಜಾಗರೂಕರಾಗಿದ್ದು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಮತ್ತು ಅಧಿಕಾರಿಗಳ ಅಧಿಕೃತ ಸೂಚನೆಗಳನ್ನು ಅನುಸರಿಸುತ್ತಾ ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಬಹುದು’ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News