Saudi Arabia | ಪ್ರಿನ್ಸ್ ಸುಲ್ತಾನ್ ವಾಯುನೆಲೆಯತ್ತ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಜನವಸತಿಯಿಲ್ಲದ ಪ್ರದೇಶದಲ್ಲಿ ಪತನ
Update: 2026-03-07 23:15 IST
ಸಾಂದರ್ಭಿಕ ಚಿತ್ರ : PC | PTI
ರಿಯಾದ್, ಮಾ. 7: ಸೌದಿ ಅರೇಬಿಯಾದ ರಿಯಾದ್ ನ ಆಗ್ನೇಯ ಭಾಗದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯತ್ತ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದು ಜನವಸತಿಯಿಲ್ಲದ ಪ್ರದೇಶದಲ್ಲಿ ಬಿದ್ದಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಕುರಿತು ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಅಧಿಕೃತ ವಕ್ತಾರರು, ಕ್ಷಿಪಣಿ ಪತನದಿಂದ ಯಾವುದೇ ಸಾವುನೋವು ಅಥವಾ ಆಸ್ತಿ ಹಾನಿಯನ್ನುಂಟಾಗಿಲ್ಲ ಎಂದು ಹೇಳಿದ್ದಾರೆ.
ರಿಯಾದ್‌ನ ಆಗ್ನೇಯದಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆಯು ಸೌದಿ ಅರೇಬಿಯಾ ಹಾಗೂ ಅಮೆರಿಕದ ಸೇನಾ ಪಡೆಗಳು ಕಾರ್ಯಾಚರಣೆ ನಡೆಸುವ ಪ್ರಮುಖ ತಾಣಗಳಲ್ಲಿ ಒಂದಾಗಿದೆ ಎಂದು Aljazeera ವರದಿ ಮಾಡಿದೆ.