×
Ad

ಸಾಗರ: ಅಂಗನವಾಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನ

Update: 2023-07-17 15:30 IST

ಸಾಗರ: ನೆಹರೂ ನಗರದಲ್ಲಿರುವ ಅರಳಿಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ತಡರಾತ್ರಿ ಕಳ್ಳತನ ಯತ್ನ ನಡೆದಿರುವ ಬಗ್ಗೆ ವರದಿಯಾಗಿದೆ.

ಸೋಮವಾರ ಬೆಳಿಗ್ಗೆ ಅಂಗನಾಡಿ ಕಾರ್ಯಕರ್ತೆ ಬಾಗಿಲು ತೆರೆದಾಗ ಬಾಗಿಲಿಗೆ ಹಾಕಿದ್ದ ಬೀಗ ಒಡೆಯಲಾಗಿತ್ತು. ಅಂಗನವಾಡಿ ಒಳಗೆ ನುಗ್ಗಿರುವ ಕಳ್ಳರು ಬೇಳೆ ಚೀಲವನ್ನು ಹರಿದು ಬೇಳೆಯನ್ನು ಕೆಳಗೆ ಚೆಲ್ಲಿದ್ದಾರೆ. ಮೊಟ್ಟೆಯನ್ನು ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ನಗರಸಭೆ ಸದಸ್ಯೆ ಉಷಾ ಗುರುಮೂರ್ತಿ, ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News