×
Ad

'ಸು ಫ್ರಮ್ ಸೋ' ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಬಾಲಿವುಡ್ ನಟ ಅಜಯ್ ದೇವ್‌ ಗನ್

Update: 2025-08-12 20:09 IST

ಮುಂಬೈ: ಬಾಲಿವುಡ್ ನಟ, ನಿರ್ದೇಶಕ ಅಜಯ್ ದೇವ್‌ ಗನ್ 'ಸು ಫ್ರಮ್ ಸೋ' ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಚಿತ್ರದ ಬಗ್ಗೆ ಮಾತನಾಡಲು ಚಿತ್ರ ತಂಡವನ್ನು ಆಹ್ವಾನಿಸಿದ್ದಾರೆ.

ಈ ಕುರಿತು ಫೇಸ್‌ ಬುಕ್‌ನಲ್ಲಿ ಪೋಸ್ಟ್ ಮಾಡಿದ 'ಸು ಫ್ರಮ್ ಸೋ' ಚಿತ್ರದ ನಿರ್ದೇಶಕ, ನಟ ಜೆ.ಪಿ. ಥುಮಿನಾಡ್, ಅಜಯ್ ದೇವ್‌ ಗನ್ ಅವರಿಗೆ ನಮ್ಮ 'ಸು ಫ್ರಮ್ ಸೋ' ಚಿತ್ರ ತುಂಬಾ ಇಷ್ಟವಾಗಿದೆ. ಚಿತ್ರದ ಬಗ್ಗೆ ಮಾತನಾಡಲು ಅವರು ನಮ್ಮ ತಂಡವನ್ನು ಆಹ್ವಾನಿಸಿದ್ದರು. ಅವರು ನಿಜವಾಗಿಯೂ ತಮ್ಮ ಅದ್ಭುತ ವ್ಯಕ್ತಿತ್ವವನ್ನು ಮೆರೆದಿದ್ದಾರೆ. ಅಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.

ಜೆ.ಪಿ.ಥುಮಿನಾಡ್ ನಿರ್ದೇಶನದ 'ಸು ಫ್ರಮ್ ಸೋ' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ಮಲೆಯಾಳಂ ಹೀಗೆ ಮೂರು ಭಾಷೆಯಲ್ಲಿ ಇದು ರಿಲೀಸ್ ಆಗಿದೆ. ಜೆಪಿ ಥುಮಿನಾಡ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ಸು ಫ್ರಮ್ ಸೋ' ಚಿತ್ರದಲ್ಲಿ ಬಹುತೇಕ ಕರಾವಳಿ ರಂಗಭೂಮಿಯ ಕಲಾವಿದರು ಬಣ್ಣ ಹಚ್ಚಿದ್ದರು. ಈ ಚಿತ್ರದ ಗಳಿಕೆ 60 ಕೋಟಿ ರೂ. ದಾಟಿದೆ ಎಂದು ಹೇಳಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News