×
Ad

ಬಸ್‌ ಹತ್ತಲು ಮಹಿಳೆಯರ ಪೈಪೋಟಿ; ಕಳಚಿ ಹೋದ ಬಾಗಿಲು!

Update: 2023-06-17 22:28 IST

ಕೊಳ್ಳೇಗಾಲ (ಚಾಮರಾಜನಗರ), ಜೂ.17: ರಾಜ್ಯದ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ‘ಶಕ್ತಿ ಯೋಜನೆ’ ಜಾರಿಗೊಳಿಸಿದ ಎರಡನೆ ವಾರಕ್ಕೆ ಕಾಲಿಟ್ಟಿದ್ದು, ಎತ್ತ ನೋಡಿದರೂ ಸರಕಾರಿ ಬಸ್‍ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.

ಈ ನಡುವೆ ಕೊಳ್ಳೇಗಾಲ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಬಸ್‌ಗೆ ಹತ್ತಲು ಮಹಿಳೆಯರ ನಡುವೆ ಉಂಟಾದ ಪೈಪೋಟಿಯಲ್ಲಿ ಬಸ್‌ನ ಬಾಗಿಲು ಕಿತ್ತು ಬಂದಿದೆ.

ರವಿವಾರ ವಾರಾಂತ್ಯ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪ್ರಯಾಣಿಕರ ನಡುವೆ ನೂಕು ನುಗ್ಗಲಿನಲ್ಲಿ ಬಸ್ ಬಾಗಿಲು ಮುರಿತ ಕಂಡಿದೆ. ಮುರಿದ ಬಾಗಿಲನ್ನು ಕಂಡು ಚಾಲಕ ಹಾಗೂ ನಿರ್ವಾಹಕ ಮಹಿಳೆಯರನ್ನೆಲ್ಲ ಬಸ್‌ನಿಂದ ಕೆಳಗಿಳಿಸಿ ಬೇರೆ ಬಸ್‌ನಲ್ಲಿ ಕಳುಹಿಸಿದ್ದಾರೆನ್ನಲಾಗಿದೆ.

ಎರಡು ದಿನ ರಜಾ ದಿನವಾಗಿರುವ ಹಿನ್ನೆಲೆ ಶನಿವಾರ ಮುಂಜಾನೆಯೇ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಎಲ್ಲ ಬಸ್‍ಗಳು ಕೂಡ ತುಂಬಿ ತುಳುಕುತ್ತಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News