×
Ad

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಇಂದು ಕಾಂಗ್ರೆಸ್, ಉದ್ದವ್ ಠಾಕ್ರೆ ತಂಡ ಮಹತ್ವದ ಸಭೆ

Update: 2023-07-04 10:29 IST

Photo: PTI

ಮುಂಬೈ: ಮಹಾರಾಷ್ಟದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್ ಪವಾರ್ ಹಾಗೂ ಇತರ ಎಂಟು ಶಾಸಕರು ರವಿವಾರ ಶಿವಸೇನೆ-ಬಿಜೆಪಿ ಸರಕಾರದೊಂದಿಗೆ ಕೈಜೋಡಿಸಿದ ನಂತರ ಪರಸ್ಪರರನ್ನು ಹುದ್ದೆಯಿಂದ ಉಚ್ಚಾಟಿಸುವ ಮೂಲಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ (ಎನ್ ಸಿಪಿ) ಜಗಳವು ತಾರಕಕ್ಕೇರಿದೆ. ಇಂದು ಮುಂಬೈನಲ್ಲಿ ಎರಡೂ ಬಣಗಳು ಪ್ರತ್ಯೇಕ ಸಭೆ ನಡೆಸಲಿವೆ.

ಈ ಎಲ್ಲ ಗೊಂದಲದ ನಡುವೆಯೇ ಕಾಂಗ್ರೆಸ್ ಇಂದು ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಕ್ರಮದ ಕುರಿತು ಚರ್ಚೆ ನಡೆಸಲಿದೆ. ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಗರಿಷ್ಠ ಸಂಖ್ಯೆಯ ಶಾಸಕರನ್ನು ಹೊಂದಿರುವ ಪಕ್ಷವು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬಯಸುತ್ತದೆ. ಈ ಬೇಡಿಕೆಗೆ ಎನ್ ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಬೆಂಬಲವಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆ ವಿಪಕ್ಷ ನಾಯಕನ ಸ್ಥಾನ ಸಿಗುವ ಸಾಧ್ಯತೆಯಿದೆ.

"ಗರಿಷ್ಟ ಸಂಖ್ಯೆಯ ಶಾಸಕರನ್ನು ಹೊಂದಿರುವ ಪಕ್ಷವು ವಿರೋಧ ಪಕ್ಷದ ಹುದ್ದೆಗೆ ಬೇಡಿಕೆ ಇಡಬಹುದು, ಇದು ಮಾನ್ಯ ಬೇಡಿಕೆಯಾಗಿದೆ" ಎಂದು ಶರದ್ ಪವಾರ್ ಹೇಳಿದ್ದಾರೆ. ರವಿವಾರದಂದು. ಅಜಿತ್ ಪವಾರ್ ಬದಲಿಗೆ ಜಿತೇಂದ್ರ ಅವದ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಯಿತು.

ಶರದ್ ಪವಾರ್ ಅವರು ನಿನ್ನೆ ಸತಾರಾ ಜಿಲ್ಲೆಯಲ್ಲಿ ತಮ್ಮ ಗುರು ಹಾಗೂ ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪಕ್ಷವನ್ನು ಪುನರ್ ನಿರ್ಮಿಸುವ ಪ್ರತಿಜ್ಞೆ ಮಾಡಿದರು. ಈ ವೇಳೆ ಅವರು ಶಕ್ತಿ ಪ್ರದರ್ಶನವನ್ನು ಮಾಡಿದ್ದರು.

ಬಿಜೆಪಿ ಎಲ್ಲಾ ವಿರೋಧ ಪಕ್ಷಗಳನ್ನು "ನಾಶ" ಮಾಡಲು ಪ್ರಯತ್ನಿಸುತ್ತಿದೆ . ಕೋಮುವಾದಿ ಶಕ್ತಿಗಳ ವಿರುದ್ಧ ನನ್ನ ಹೋರಾಟ ಇಂದಿನಿಂದ ಪ್ರಾರಂಭವಾಗುತ್ತದೆ. ಇಂತಹ ಬಂಡಾಯಗಳು ನಡೆಯುತ್ತವೆ. ನಾನು ಪಕ್ಷವನ್ನು ಪುನರ್ ನಿರ್ಮಿಸುತ್ತೇನೆ" ಎಂದು ಶರದ್ ಪವಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಉದ್ಧವ್ ಠಾಕ್ರೆ ತಂಡವೂ ಇಂದು ಸಭೆ ನಡೆಸಲಿದೆ. ಶಿವಸೇನೆ (ಯುಬಿಟಿ) ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಏಕನಾಥ್ ಶಿಂಧೆ ಬದಲಿಗೆ ಅಜಿತ್ ಪವಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News