×
Ad

'ಕರೆಂಟ್' ಇಶ್ಯೂ; ಮತ್ತೆ ಮರಳಿ ಬರುತ್ತಿರುವ ವೈರ್ಡ್ ಹೆಡ್‌ ಫೋನ್‌ ಗಳು!

Update: 2025-12-21 17:51 IST

Photo credit : Meta AI

ಇದೀಗ ಬಹಳಷ್ಟು ಮಂದಿ ಮರಳಿ ವೈರ್ಡ್ ಇಯರ್‌ಫೋನ್‌ ಗಳ ಕಡೆಗೆ ತಿರುಗಲು ಮುಖ್ಯ ಕಾರಣವೇನು? ಬ್ಯಾಟರಿ ಚಾರ್ಜಿಂಗ್ ದೊಡ್ಡ ಸಮಸ್ಯೆಯಾಗಿದೆ. ಅನುಕೂಲಕರವಾಗಿದ್ದರೂ, ಪದೇ ಪದೆ ಚಾರ್ಜ್ ಮಾಡುವುದು, ಅರ್ಧದಲ್ಲಿ ಕೈಕೊಡುವುದು, ಬೀಳುವುದು ಇತ್ಯಾದಿಗಳಿಂದಾಗಿ ಜನರು ವೈರ್ಡ್‌ಗೆ ಮರಳುತ್ತಿದ್ದಾರೆ.

ತಂತ್ರಜ್ಞಾನವೆಂದರೆ ಪ್ರತೀ ಬಾರಿ ಹೊಸತನ್ನೇ ಬಳಸುವುದು ಎಂದುಕೊಳ್ಳಬೇಕಾಗಿಲ್ಲ. ಕೆಲವೊಮ್ಮೆ ಹಳೆಯದು ಮರಳಿ ಬರುವುದೂ ಇದೆ. ಭಾರತೀಯ ಮಾರುಕಟ್ಟೆಗೆ 2000ನೇ ದಶಕದ ಮಧ್ಯದಲ್ಲಿ ಬಂದಿದ್ದ ಬ್ಲೂಟೂತ್ ಹೆಡ್‌ ಸೆಟ್‌ ಗಳು ಬದಲಾಗಿ ಮತ್ತೆ ವೈರ್ಡ್ ಹೆಡ್‌ಫೋನ್‌ಗಳು ಜನಪ್ರಿಯವಾಗುತ್ತಿವೆ! ಇದು ತಂತ್ರಜ್ಞಾನದಲ್ಲಿ ಹಿಂಜರೆತವಾದರೂ ಅನುಕೂಲರವಾದ ಬಳಕೆಯಾಗಿದೆ.

► ಬ್ಲೂಟೂತ್‌ ಗಳ ಆರಂಭದ ತವಕ

ಆರಂಭದಲ್ಲಿ ಬ್ಲೂಟೂತ್‌ ಗಳು ಒಂದು ಕಿವಿಗೆ ಮಾತ್ರ ಸಿಗುತ್ತಿತ್ತು. ಕರೆ ಮಾಡಲೆಂದೇ ವಿನ್ಯಾಸಗೊಳಿಸಲಾಗಿತ್ತು. ಆದರೆ 2010ರ ಮಧ್ಯಭಾಗದಲ್ಲಿ ದೈನಂದಿನ ಬಳಕೆಗೆ ಬಂದಿತ್ತು, 2015-16ರಲ್ಲಿ ಕುತ್ತಿಗೆ ಸುತ್ತ ಹಾಕಿಕೊಳ್ಳುವ ಬ್ಲೂಟೂತ್ ಹೆಡ್‌ ಸೆಟ್‌ ಗಳು ಸಾಮಾನ್ಯವಾಗಿದ್ದವು.

ಜೇಬಿನಲ್ಲಿರುವ ಫೋನ್‌ ನಿಂದ ಕೇಬಲ್ ನೇತಾಡುವುದು. ಕೇಳಿಸಿಕೊಳ್ಳುತ್ತಿರುವಂತೆ ಚಲನೆಯನ್ನು ನಿರ್ಬಂಧಿಸುವುದು, ಫೋನ್‌ ಗೆ ಕಟ್ಟಿಹಾಕಿದ ಅನುಭವ, ವ್ಯಾಯಾಮದ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಮೊದಲಾದ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು. ಡಿಜಿಟಲ್ ಕ್ರಾಂತಿ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇದು ಅನಿವಾರ್ಯ ಬದಲಾವಣೆಯಾಗಿತ್ತು.

ಇದೀಗ ಆಧುನಿಕ ವೈರ್‌ ಲೆಸ್ ಸ್ಟೀರಿಯೊವನ್ನು ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ ಮತ್ತು ಸ್ಮಾರ್ಟ್ ಟಿವಿಯಲ್ಲೂ ಬಳಸಬಹುದು. ಧ್ವನಿಯ ಗುಣಮಟ್ಟ, ಭದ್ರತೆ ಮೊದಲಾಗಿ ಬಹಳಷ್ಟು ಬಳಕೆದಾರರಿಗೆ ಇದು ಉತ್ತಮ ವಸ್ತುವಾಗಿತ್ತು. ಆದರೆ ಬಹಳಷ್ಟು ಮಂದಿಗೆ ಇದು ಮತ್ತೊಂದು ಚಾರ್ಜ್ ಮಾಡುವ ಸಾಧನವಾಯಿತು. ಐ ಫೋನ್ 7 ಅನ್ನು ವೈರ್ ಪಾಯಿಂಟ್ ಇಲ್ಲದೆ ಬಿಡುಗಡೆ ಮಾಡಿದಾಗ ಬ್ಲೂಟೂತ್ ವಿನ್ಯಾಸಗಳು ಭವಿಷ್ಯದ ಸಾಧನವಾದವು. ಅನೇಕ ಆಂಡ್ರಾಯ್ಡ್ ಫೋನ್‌ ಗಳೂ 2017-19ರ ನಡುವೆ ಇಯರ್‌ಫೋನ್‌ ಗೆ ಜಾಗವಿಲ್ಲದೆ ಬಿಡುಗಡೆ ಮಾಡಿದವು.

► ಹಾಗಿದ್ದರೆ ವೈರ್ಡ್ ಇಯರ್‌ಫೋನ್ ಮರಳಿ ಬಂದಿರುವುದೇಕೆ?

ದೊಡ್ಡದಾದ ಪ್ರಚಾರಾಭಿಯಾನವಿಲ್ಲ, ಉತ್ಪನ್ನದ ಬಿಡುಗಡೆಯ ಹಬ್ಬವೂ ಇಲ್ಲ. ಹಾಗಿದ್ದರೂ ಹೆಡ್‌ ಫೋನ್‌ ಗಳು ಮರಳಿ ಬಂದಿವೆ. ಇದೀಗ ಬಹಳಷ್ಟು ಮಂದಿ ಮರಳಿ ವೈರ್ಡ್ ಇಯರ್‌ ಫೋನ್‌ ಗಳ ಕಡೆಗೆ ತಿರುಗಲು ಮುಖ್ಯ ಕಾರಣವೇನು? ಬ್ಯಾಟರಿ ಚಾರ್ಜಿಂಗ್ ದೊಡ್ಡ ಸಮಸ್ಯೆಯಾಗಿದೆ. ಅನುಕೂಲಕರವಾಗಿದ್ದರೂ, ಆಗಾಗ್ಗೆ ಚಾರ್ಜ್ ಮಾಡಬೇಕಾದ ಅನಿವಾರ್ಯತೆ ಅದನ್ನು ಬದಿಗೆ ತಳ್ಳುವಂತೆ ಮಾಡಿದೆ.

ಡೆಸ್ಕ್ ಡ್ರಾಯರ್‌ ಗಳು, ಬ್ಯಾಕ್‌ ಪ್ಯಾಕ್‌ ಗಳಲ್ಲಿ ಇದೀಗ ವೈರ್ಡ್ ಹೆಡ್‌ ಫೋನ್‌ ಗಳನ್ನು ಕಾಣಬಹುದು. ಮತ್ತು ಪ್ರಯಾಣದ ಸಂದರ್ಭದಲ್ಲಿ ಬ್ಲೂಟೂತ್‌ ಗಿಂತ ವೈರ್ಡ್ ಹೆಡ್‌ಫೋನ್‌ ಗಳೇ ಉತ್ತಮ ಎನ್ನುವ ಭಾವನೆ ಜನರಲ್ಲಿದೆ. ಮೀಟಿಂಗ್‌ ನಂತಹ ದೀರ್ಘ ಮಾತುತೆಯ ಸಂದರ್ಭದಲ್ಲಿ ವೈರ್‌ ಲೆಸ್‌ ಗಿಂತ ವೈರ್ ಹೆಚ್ಚು ಅನುಕೂಲಕರವಾಗಿರುತ್ತದೆ. ಚಾರ್ಜ್ ಮುಗಿಯುವ, ಬೀಳುವ ಅಪಾಯ ಕಡಿಮೆ ಇರುತ್ತದೆ.

ಡಿಜಿಟಲ್ ಆಗಿ ಕಡಿಮೆ ಸಮಯ ಬಳಸುವ ಉತ್ಸಾಹಿ ಜನರಿಗೆ ಡಾಟಾ ಸೋರಿಕೆಯಾಗುವ ಆತಂಕವಿಲ್ಲದೆ ಬಳಸುವ ಸರಳ ಸಾಧನವಾಗಿದೆ ವೈರ್ಡ್ ಹೆಡ್‌ಫೋನ್. ಮುಖ್ಯವಾಗಿ ಬ್ಯಾಟರಿ ಮುಗಿಯುವ ಆತಂಕವಿಲ್ಲದೆ ಬಳಸುವ ವೈರ್ಡ್ ಹೆಡ್‌ಫೋನ್ ಬಹಳ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದು ಹಳತನ್ನು ಮರಳಿ ತರುವಂತಹ ಸ್ಮರಣೆಗೆ ಸಂಬಂಧಿಸಿದ ವಿಷಯವಲ್ಲ. ಬದಲಾಗಿ ಅನುಕೂಲಕರವಾದ ಬಳಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News