×
Ad

ತುಮಕೂರು: ಹಾವು ಕಚ್ಚಿ ರೈತ ಸಾವು

Update: 2023-06-21 14:25 IST

ಫೋಟೋ:(ಪಿಟಿಐ) ಸಾಂದರ್ಭಿಕ ಚಿತ್ರ

ತಿಪಟೂರು: ಹುಲ್ಲು ತೆಗೆಯುವ ವೇಳೆ ಹಾವು ಕಚ್ಚಿ ರೈತನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಘಟಕಿನಕೆರೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನ ಹೊನ್ನವಳ್ಳಿ ಹೋಬಳಿಯ ಘಟಕಿನಕೆರೆ ಗ್ರಾಮದ ರಮೇಶ್(52) ಬಿನ್ ರಂಗಪ್ಪ ಮೃತ ರೈತ ಎಂದು ಗುರುತಿಸಲಾಗಿದೆ.

ಹಸುಗಳಿಗೆ ತಿನ್ನಲು ಹುಲ್ಲನ್ನು ಹಿರಿಯುವಾಗ ಬವಣೆಯಲ್ಲಿದ್ದ ಇದ್ದ ಹಾವು, ಎಡಗಾಲಿಗೆ ಕಚ್ಚಿ ಸ್ಥಳದಲ್ಲಿಯೇ ರೈತ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹೊನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News