×
Ad

ಕ್ಷಮೆಯಾಚಿಸಿದ ನಂತರವೂ ಮತ್ತೆ ಪಾನ್‌ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಕ್ಷಯ್‌ ಕುಮಾರ್‌

Update: 2023-10-09 16:23 IST

Screengrab: X/@NishantADHolic_

ಹೊಸದಿಲ್ಲಿ: ಈ ಹಿಂದೆ ಪಾನ್‌ ಮಸಾಲಾ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ವಿವಾದಕ್ಕೀಡಾಗಿ ನಂತರ ಕ್ಷಮೆಯನ್ನೂ ಯಾಚಿಸಿದ್ದ ಹಾಗೂ ಇನ್ನು ಮುಂದೆ ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ನಟ ಅಕ್ಷಯ್‌ ಕುಮಾರ್ ಇದೀಗ ಮತ್ತೊಮ್ಮೆ ಪಾನ್‌ ಮಸಾಲಾ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣಿಗರಲ್ಲಿ ಆಕ್ರೋಶ ಮೂಡಿಸಿದೆ.

ಅಕ್ಷಯ್‌ ಕುಮಾರ್‌ ಅವರ ಹೊಸ ಸಿನೆಮಾ ‘ಮಿಷನ್‌ ರಾಣಿಗಂಜ್‌’ ಬಾಕ್ಸಾಫೀಸಿನಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡದೇ ಇರುವ ನಡುವೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ವಿಶ್ವ ಕಪ್‌ ಪಂದ್ಯ ವೀಕ್ಷಿಸುತ್ತಿದ್ದವರಿಗೆ ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌ ಮತ್ತು ಶಾರುಖ್‌ ಖಾನ್‌ ಜೊತೆಯಾಗಿ ಕಾಣಿಸಿಕೊಂಡಿರುವ ತಂಬಾಕು ಬ್ರ್ಯಾಂಡ್‌ ಒಂದರ ಜಾಹೀರಾತೊಂದರಲ್ಲಿ ಭಾಗವಹಿಸಿರುವುದು ಆಘಾತ ಮೂಡಿಸಿದೆ. ಇದೇ ಬ್ರ್ಯಾಂಡಿನ ಜಾಹೀರಾತಿನಿಂದ ಅಕ್ಷಯ್‌ ಈ ಹಿಂದೆ ಹಿಂದೆ ಸೆರಿದಿದ್ದರು.

ನಟನದ್ದು “ಬೂಟಾಟಿಕೆ” ಎಂದು ಹಲವರು ಅಕ್ಷಯ್‌ ಕುಮಾರ್‌ ಅವರನ್ನು ಟೀಕಿಸಿದ್ದಾರೆ.

“ನೀವು ಈ ಬ್ರ್ಯಾಂಡ್‌ಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದೀರಿ. ಹಾಲಿ ಜಾಹೀರಾತುಗಳು ಅವುಗಳ ಅಂತಿಮ ದಿನಾಂಕದ ತನಕ ಮುಂದುವರಿಯಲಿವೆ ಎಂದಿದ್ದೀರಿ ಹಾಗೂ ಅದರಿಂದ ದೊರೆತ ಹಣವನ್ನು ಒಳ್ಳೆಯ ಉದ್ದೇಶಕ್ಕೆ ನೀಡುವುದಾಗಿ ಹೇಳಿದ್ದೀರಿ. ನೀವು ಕಾಣಿಸಿಕೊಂಡಿರುವ ಹೊಸ ಜಾಹೀರಾತು ಈಗ ಹೇಗೆ ಬಂದಿದೆ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ಕೆಲ ಅಕ್ಷಯ್‌ ಕುಮಾರ್‌ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದು, ಅವರು ಕ್ಷಮೆ ಕೇಳೋ ಮುನ್ನವೇ ಚಿತ್ರೀಕರಣಗೊಂಡ ಜಾಹೀರಾತು ಆಗಿರಬೇಕು ಎಂದು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News