×
Ad

Vijayapura | ಮಂಗಳೂರು ಗ್ರಾಮದಲ್ಲಿ ಲಘು ವಿಮಾನ ಪತನ; ಇಬ್ಬರಿಗೆ ಗಾಯ

Update: 2026-02-08 17:39 IST

ವಿಜಯಪುರ : ಜಿಲ್ಲೆಯ ಬಬಲೇಶ್ವರ ಬಳಿ ಇರುವ ಮಂಗಳೂರು ಗ್ರಾಮದಲ್ಲಿ ರವಿವಾರ ಲಘು ವಿಮಾನವೊಂದು ಪತನವಾಗಿದೆ. ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಮಾನದಲ್ಲಿ ತರಬೇತಿ ನೀಡುತ್ತಿದ್ದ ಕ್ಯಾಪ್ಟನ್ ಕುನಾಲ್ ಮಲೋತ್ರಾ, ಟ್ರೈನಿ ಪೈಲಟ್ ಗೌತಮ್ ಅವರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ರೆಡ್ ಬರ್ಡ್ ಏವಿಯೇಷನ್ ಸಂಸ್ಥೆಗೆ ಸೇರಿದ ಸೆಸ್ನಾ 172 ಟ್ಯಾಂಗೋ ಚಾರ್ಲಿ ಎಂಬ ಹೆಸರಿನ ಈ ವಿಮಾನ ಕಲಬುರಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ವೇಳೆ ಬಬಲೇಶ್ವರ ಸಮೀಪದ ಮಂಗಳೂರು ಗ್ರಾಮದಲ್ಲಿ ನೆಲಕ್ಕುರುಳಿದೆ.

ತಕ್ಷಣವೇ ಅಲ್ಲಿದ್ದ ಸ್ಥಳೀಯರು ಗಾಯಾಳಗಳ ರಕ್ಷಣೆಯಲ್ಲಿ ತೊಡಗಿದ್ದಾರೆ, ಕೂಡಲೇ ಅಂಬ್ಯುಲೆನ್ಸ್ ಮುಖಾಂತರ ವಿಜಯಪುರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News