×
Ad

Oman | ಮಸ್ಕತ್ ಸಮೀಪ ಹಡಗಿನ ಬಳಿ ಸ್ಫೋಟ: ವರದಿ

Update: 2026-03-04 06:04 IST

ಸಾಂದರ್ಭಿಕ ಚಿತ್ರ | Photo Credit : ANI

ಮಸ್ಕತ್: ಒಮಾನ್ ರಾಜಧಾನಿ ಮಸ್ಕತ್‌ ನ ಪೂರ್ವ ಭಾಗದಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಸಮೀಪ ಸ್ಫೋಟ ಸಂಭವಿಸಿರುವ ಬಗ್ಗೆ ಯುಕೆ ಮೆರಿಟೈಮ್ ಟ್ರೇಡ್ ಆಪರೇಷನ್ಸ್‌ (UKMTO) ಮಾಹಿತಿ ನೀಡಿದೆ.

ಮಸ್ಕತ್‌ ನಿಂದ ಸುಮಾರು 137 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿರುವುದಾಗಿ UKMTO ಹೇಳಿದೆ. ಹಡಗಿನ ಸಮೀಪದಲ್ಲಿ ದೊಡ್ಡ ಸ್ಫೋಟ ಸಂಭವಿಸಿದ ನಂತರ ಸಮುದ್ರದ ನೀರಿನಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ಹಡಗಿನ ಮಾಸ್ಟರ್ ವರದಿ ನೀಡಿದ್ದಾರೆ.

ಘಟನೆಯಿಂದ ಹಡಗು ಹಾಗೂ ಅದರಲ್ಲಿದ್ದ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ ಎಂದು Aljazeera ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News